IPL 2022 | ಗುಜರಾತ್ ಟೈಟಾನ್ಸ್ ಗೆ ಐಪಿಎಲ್ ಟೈಟಲ್..!
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಗುಜರಾತ್ ಟೈಟಾನ್ಸ್ ಕಮಾಲ್ ಮಾಡಿದ್ದು, ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ ಗೆ ಉತ್ತಮ ಆರಂಭ ದೊರಕಿತು.
ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್(22) ಹಾಗೂ ಜಾಸ್ ಬಟ್ಲರ್(39) ರನ್ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ನಂತರ ಬಂದ ಬ್ಯಾಟರ್ ಗಳಿಂದ ನಿರೀಕ್ಷಿತ ಆಟ ಹೊರಬಲಿಲ್ಲ.
ಸಂಜೂ ಸ್ಯಾಮ್ಸನ್(14), ಪಡಿಕ್ಕಲ್(2), ಹೆಟ್ಮಾಯೆರ್(11), ಅಶ್ವಿನ್(6), ಪರಾಗ್(15), ಬೋಲ್ಟ್(11), ಮೆಕಾಯ್(8) ಜವಾಬ್ದಾರಿಯುತ ಆಟವಾಡುವಲ್ಲಿ ವಿಫಲರಾದರು. ಪರಿಣಾಮ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 9 ವಿಕೆಟ್ಗೆ 130 ರನ್ಗಳಿಸಿತು.

ರಾಜಸ್ಥಾನ್ ರಾಯಲ್ಸ್ ನೀಡಿದ 131 ರನ್ಗಳ ಸಾಧಾರಣ ಟಾರ್ಗೆಟ್ ಬೆನ್ನತಿದ ಗುಜರಾತ್ ಟೈಟನ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ.
ಆರಂಭಿಕನಾಗಿ ಬಂದ ವೃದ್ಧಿಮಾನ್ ಸಾಹ (5) ಹಾಗೂ 1ನೇ ಕ್ರಮಾಂಕದಲ್ಲಿ ಬಂದ ಮ್ಯಾಥ್ಯೂ ವೇಡ್ (8) ರನ್ ಗಳಿಸಿ ಬಹುಬೇಗನೆ ನಿರ್ಗಮಿಸಿದರು.
ಆದರೆ ನಂತರ ಗಿಲ್ ಜೊತೆಯಾದ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಆಟದ ಪ್ರದರ್ಶನ ನೀಡಿದರು. ಇವರ ಆಟದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡದ ಗೆಲುವು ಪಕ್ಕಾ ಆಯ್ತು.
ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯ 34 ರನ್ ಗಳಿಸಿ ಔಟ್ ಆದರು. ನಂತರ ಬಂದ ಡೇವಿಡ್ ಮಿಲ್ಲರ್, ಗಿಲ್ ಜೊತೆ ಸೇರಿ ತಂಡವನ್ನು ಗೆಲುವಿನ ತಡ ಸೇರಿಸಿದರು.
ಗಿಲ್ 45 ರನ್, ಮಿಲ್ಲರ್ 32 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಪರಿಣಾಮ ಗುಜರಾತ್ ಟೈಟನ್ಸ್ 18.1 ಓವರ್ನಲ್ಲಿ 3 ವಿಕೆಟ್ಗೆ 133 ರನ್ಗಳಿಸಿ ಗೆದ್ದುಬೀಗಿತು. ರಾಜಸ್ಥಾನ್ ಪರ ಬೋಲ್ಟ್, ಪ್ರಸಿದ್ಧ್ ಹಾಗೂ ಚಹಲ್ ತಲಾ 1 ವಿಕೆಟ್ ಪಡೆದರು.







