Rishabh Pant : ಒಂದೇ ಪಂದ್ಯದಲ್ಲಿ ಕೆಟ್ಟ ದಾಖಲೆ.. ಅಪರೂಪದ ದಾಖಲೆ
ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿ ಮೂಲಕ ರಿಷಬ್ ಪಂತ್ ಟೀಂ ಇಂಡಿಯಾದ 8ನೇ ನಾಯಕರಾಗಿದ್ದಾರೆ.
ರಿಷಬ್ ಪಂತ್ ಟೀಂ ಇಂಡಿಯಾದ ಪರ 43 ಟಿ20 ಪಂದ್ಯಗಳನ್ನು ಆಡಿದ್ದಾರೆ. 24 ವರ್ಷ 248 ದಿನದಲ್ಲಿ ಪಂತ್ ಟೀಂ ಇಂಡಿಯಾದ ನಾಯಕರಾಗಿದ್ದಾರೆ.
ಇದರೊಂದಿಗೆ ಅತಿ ಸಣ್ಣ ವಯಸ್ಸಿನಲ್ಲಿ ಟೀಂ ಇಂಡಿಯಾದ ನಾಯಕರಾದ ಸಾಧನೆ ಮಾಡಿದ್ದಾರೆ.
ಆದ್ರೆ ಈ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಪಂತ್ ಕೆಟ್ಟ ದಾಖಲೆ ನಿರ್ಮಿಸಿದ್ದಾರೆ. ನಾಯಕರಾದ ಮೊದಲ ಪಂದ್ಯದಲ್ಲಿಯೇ ಸೋಲು ಕಂಡಿದ್ದಾರೆ.

ಈ ಹಿಂದೆ ವಿರಾಟ್ ಕೊಹ್ಲಿ ನಾಯಕರಾದ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದರು.
ಟೀಂ ಇಂಡಿಯಾದ ಡೈನಾಮಿಕ್ ಕ್ಯಾಪ್ಟನ್ ಕೊಹ್ಲಿ 2017 ರಲ್ಲಿ ಕಾನ್ಪುರ ವೇದಿಕೆಯಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಭಾರತ ಟಿ 20 ತಂಡಕ್ಕೆ ನಾಯಕರಾದರು.
ಈ ಪಂದ್ಯದಲ್ಲಿ ಭಾರತ ತಂಡ ಏಳು ವಿಕೆಟ್ ಗಳೊಂದಿಗೆ ಸೋಲು ಕಂಡಿತು. ಇದೀಗ ಪಂತ್ ನೇತೃತ್ವದಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಏಳು ವಿಕೆಟ್ ಗಳೊಂದಿಗೆ ಸೋಲು ಕಂಡಿದೆ.
ಅದೇ ರೀತಿ ಅಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 29 ರನ್ ಗಳಿಸಿದ್ದರು. ಇದೀಗ ರಿಷಬ್ ಪಂತ್ 29 ರನ್ ಗಳಿಸಿರೋದು ವಿಶೇಷ.








