Heavy Rain | ಗೋಕಾಕ್ – ಶಿಂಗಳಾಪುರ ಸೇತುವೆ ಮುಳುಗಡೆ
ಬೆಳಗಾವಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಪರಿಣಾಮ ಘಟಪ್ರಭಾ ನದಿ ಒಳಹರಿವು ಹೆಚ್ಚಳವಾಗಿದ್ದು, ಗೋಕಾಕ್ – ಶಿಂಗಳಾಪುರ ಸೇತುವೆ ಮುಳುಗಡೆಯಾಗಿದೆ.
ಆದ್ರೂ ಈ ಸೇತುವೆ ಮೇಲೆ ವಾಹನಗಳು ಯಾವುದೇ ಭಯವಿಲ್ಲದೇ ಸಂಚಾರ ಮಾಡುತ್ತಿವೆ.
ಮುಳುಗಡೆಯಾದ ಸೇತುವೆ ಮೇಲೆ ವಾಹನಗಳ ಪಾರ್ಕ್ ಮಾಡಿ ವಾಶಿಂಗ್ ಮಾಡೋ ವಿಡಿಯೋ ವೈರಲ್ ಆಗುತ್ತಿದೆ.
ಇದಕ್ಕೆ ನೋಡಿದ ಜನರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸರ ಹೊರಹಾಕುತ್ತಿದ್ದಾರೆ.
ಅಲ್ಲದೇ ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಕಳೆದ 9 ದಿನಗಳಿಂದ ಎಡಬಿಡದೇ ಮಳೆಯಾಗುತ್ತಿದ್ದು, ಜಿಲ್ಲೆಯ ಸಪ್ತ ನದಿಗಳು ಮೈದುಂಬಿ ಹರಿಯುತ್ತಿವೆ.
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 85 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಅಷ್ಟೇ ಪ್ರಮಾಣದ ನೀರನ್ನ ಹಿಪ್ಪರಗಿ ಬ್ಯಾರೇಜ್ ನಿಂದ ಹೊರ ಬಿಡಲಾಗುತ್ತಿದೆ.
ಇತ್ತ ಘಟಪ್ರಭಾ ನದಿಗೆ 27 ಸಾವಿರ ಕ್ಯೂಸೆಕ್, ಮಲಪ್ರಭಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಮಹಾರಾಷ್ಟ್ರ ಆಗಲೀ, ಬೆಳಗಾವಿ ಜಿಲ್ಲೆ ಜಲಾಶಯಗಳು ಇನ್ನೂ ಅರ್ಧದಷ್ಟು ಭರ್ತಿ ಆಗಿಲ್ಲ.
ಹೀಗಾಗಿ ಯಾವುದೇ ಜಲಾಶಯದಿಂದ ನೀರು ನದಿಗೆ ಬಿಡುತ್ತಿಲ್ಲ