Virat Kohli: ಏಕದಿನ ಕೆರಿಯರ್ ನಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಕೆಟ್ಟ ದಾಖಲೆ
ವಿರಾಟ್ ಕೊಹ್ಲಿ ಕಳಫೆ ಫಾರ್ಮ್ ಮುಂದುವರೆದಿದೆ.
ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಮೂಡಿಸಿದರು.
ಮೂರು ಬೌಂಡರಿಗಳೊಂದಿಗೆ ಒಳ್ಳೆ ಟಚ್ ನಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಫ್ ಸ್ಟಂಪ್ ಬಲಹೀನತೆಯೊಂದಿಗೆ ಔಟ್ ಆದ್ರು.
ರಿಸ್ ಟೊಪ್ಲಿ ಮಾಡಿದ ಗುಡ್ ಲೆಂಥ್ ಎಸೆತವನ್ನು ಅಂದಾಜಿಸಲಾಗದೇ ವಿರಾಟ್ ಕೊಹ್ಲಿ ಬಾಲ್ ಟಚ್ ಮಾಡಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿದರು. ಇದರೊಂದಿಗೆ 17 ರನ್ ಗಳಿಗೆ ಕೊಹ್ಲಿ ಔಟ್ ಆದರು.
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ದೂರವಿದ್ದ ವಿರಾಟ್ ಕೊಹ್ಲಿ ಇನ್ನುಳಿದ ಎರಡು ಪಂದ್ಯಗಳಲ್ಲಿ ಕೇವಲ 33 ರನ್ ಗಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೊಹ್ಲಿ ತನ್ನ ಏಕದಿನ ಕ್ರಿಕೆಟ್ ನಲ್ಲಿ ಅತ್ಯಂತ ಕೆಟ್ಟ ದಾಖಲೆಯನ್ನು ನಿರ್ಮಿಸಿದ್ದಾರೆ.
ಅವರು ಆಡಿದ ಕಳೆದ ಐದು ಪಂದ್ಯಗಳಲ್ಲಿ 8,18,0,16,17 ರನ್ ಗಳಿಸಿದ್ದಾರೆ.
ಕಳೆದ ಐದು ಪಂದ್ಯಗಳಿಂದ ವಿರಾಟ್ ಕೊಹ್ಲಿ 20ರ ಗಡಿ ದಾಟದೇ ಔಟ್ ಆಗಿದ್ದಾರೆ.
ಇದಕ್ಕೂ ಮುನ್ನಾ ಕೊಹ್ಲಿಗೆ ಇಂತಹ ಅನುಭವ ಆಗಿರಲೇ ಇಲ್ಲ.
ಕಳೆದ ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಬ್ಯಾಡ್ ಫಾರ್ಮ್ ನಲ್ಲಿದ್ದಾರೆ.
ಆದ್ರೂ ವಿರಾಟ್ ಅಭಿಮಾನಿಗಳು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.
ಅಲ್ಲದೇ ಮಾಜಿ ಆಟಗಾರರು ಕೂಡ ವಿರಾಟ್ ಬೆನ್ನಿಗೆ ನಿಂತಿದ್ದಾರೆ.








