Solar Storm | ಇಂದು ಭೂಮಿಗೆ ಅಪ್ಪಳಿಸಬಹುದು ಸೌರ ತೂಫಾನ್
ವಾಷಿಂಗ್ಟನ್ : ಬಾಹ್ಯಾಕಾಶದಿಂದ ಇಂದು ಭೂಮಿಗೆ ಭಾರಿ ಸೌರ ಚಂಡಮಾರುತ ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇದರ ಪರಿಣಾಮದಿಂದ ಜಿಪಿಎಸ್, ಮೊಬೈಲ್ ಮತ್ತು ರೇಡಿಯೋ ಸಿಗ್ನಲ್ಗಳು ವ್ಯತ್ಯಯಗೊಳ್ಳಲಿವೆ ಎಂದು ಸಂಶೋಧಕರು ಭವಿಷ್ಯ ನುಡಿದಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಇದನ್ನು ಖಚಿತಪಡಿಸಿದೆ.

ಸೌರ ಚಂಡಮಾರುತದ ಪ್ರಭಾವವು ಭೂ ಕಕ್ಷೆಯಲ್ಲಿರುವ ಉಪಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಬಾಹ್ಯಾಕಾಶದಲ್ಲಿ ಸಂಭವಿಸಲಿರುವ ಸೌರ ಬಿರುಗಾಳಿಗಳು ಸಾಂದರ್ಭಿಕವಾಗಿ ಭೂಮಿಗೆ ಅಪ್ಪಳಿಸುತ್ತವೆ.
ಜುಲೈ 15 ರಂದು ಸೂರ್ಯನ ಮೇಲ್ಮೈಯಲ್ಲಿ ಪ್ರಬಲವಾದ ಸೌರ ಜ್ವಾಲೆ ಸ್ಫೋಟಿಸಿತು.
The long snake-like filament cartwheeled its way off the #Sun in a stunning ballet. The magnetic orientation of this Earth-directed #solarstorm is going to tough to predict. G2-level (possibly G3) conditions may occur if the magnetic field of this storm is oriented southward! pic.twitter.com/SNAZGMmqzi
— Dr. Tamitha Skov (@TamithaSkov) July 16, 2022
ಬಲವಾದ ಫೋಟಾನ್ಗಳಿಂದ ವಿಕಿರಣದ ಸ್ಫೋಟದಿಂದ ಇದು ರೂಪುಗೊಳ್ಳುತ್ತದೆ.
ಗಂಟೆಗೆ ಲಕ್ಷ ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದೆ. ಆದಾಗ್ಯೂ, ಜುಲೈ 20-21 ರ ನಡುವೆ ಭೂಕಾಂತೀಯ ಕ್ಷೇತ್ರವನ್ನು ಸ್ಪರ್ಶಿಸಬಹುದು ಎಂದು ಸಂಶೋಧಕರು ಮೊದಲಿನಿಂದಲೂ ಹೇಳುತ್ತಿದ್ದಾರೆ.
ಈ ಹಿಂದೆ ಭೂಮಿ ಮೇಲೆ ಸೌರ ತುಪಾನುಗಳ ಪ್ರಭಾವ ಬಿದ್ದಿತ್ತು. ಸೌರ ತುಪಾನ್ ಕಾರಣದಿಂದಾಗಿ ಉತ್ತರ, ದಕ್ಷಿಣ ಧ್ರುವಗಳಲ್ಲಿ ಖಗೋಳ ಕಾಂತಿ ಪ್ರಕಾಶವಾಗಿ ಕಾಣಿಸಿತ್ತು.
ಅದೇ ಸಮಯದಲ್ಲಿ ಭೂಮಿಯ ವಾತಾವರಣ ಕೂಡ ಬಿಸಿಯಾಗುವ ಅವಕಾಶಗಳು ಇವೆ. ಮುಖ್ಯವಾಗಿ ಜಿಪಿಎಸ್, ಮೊಬೈಲ್ ಸಿಗ್ನಲ್ಸ್, ಸಾಟಿಲೈಟ್ ಟಿವಿ ಸೇವೆಗಳು ಸ್ಥಗಿತಗೊಳ್ಳಬಹುದು.








