Bangalore | ಪೊಲೀಸ್ ಆಯುಕ್ತರ ಕಚೇರಿ ಬಳಿ ವಿಷ ಕುಡಿದ ವ್ಯಕ್ತಿ
ಬೆಂಗಳೂರು : ಪೊಲೀಸರು ನ್ಯಾಯ ಕೊಡಿಸಿಲ್ಲ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಜಯಪುರ ಮೂಲದ ಸಿದ್ದರಾಮಗೌಡ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಅಮೃತಹಳ್ಳಿ ಪೊಲೀಸರು ನಮಗೆ ನ್ಯಾಯಕೊಡಿಸಿಲ್ಲ ಎಂದು ಆರೋಪಿಸಿ ಸಿದ್ದರಾಮಗೌಡ ಇಂದು ಬೆಳಿಗ್ಗೆ ಪೊಲೀಸ್ ಕಮೀಷನರ್ ಅವರನ್ನು ಭೇಟಿಯಾಗೋದಕ್ಕೆ ಬಂದಿದ್ದರು.

ಆದ್ರೆ ಕಮೀಷನರ್ ಪ್ರತಾಪ್ ರೆಡ್ಡಿ ಭೇಟಿಗೆ ಅವಕಾಶ ಸಿಕ್ಕಿಲ್ಲ. ಇದರಿಂದ ಬೇಸತ್ತ ಸಿದ್ದರಾಮಗೌಡ ತನ್ನ ಬಳಿಯಿದ್ದ ವಿಷದ ಬಾಟಲಿ ತೆಗೆದು ತಕ್ಷಣ ವಿಷ ಸೇವಿಸಿದ್ದಾರೆ.
ಇದರಿಂದ ಅಸ್ವಸ್ಥಗೊಂಡಿದ್ದ ಸಿದ್ದರಾಮಗೌಡ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.








