Kolar | ಮಾಲೂರು ನಗರದ ರಸ್ತೆಗಳು ಧೂಳಿನಮಯ
ಕೋಲಾರ : ಜಿಲ್ಲೆಯ ಮಾಲೂರು ಪಟ್ಟಣ ರಸ್ತೆಗಳು ಸಂಪೂರ್ಣವಾಗಿ ಧೂಳಿನ ಮಯವಾಗಿವೆ.
ನಗರದ ಮಾಸ್ತಿ ರಸ್ತೆ, ರೈಲ್ವೆ ಬ್ರಿಡ್ಜ್ ರಸ್ತೆ ಕಿತ್ತು ಹೋಗಿದ್ದು, ಜನರು, ವಾಹನ ಸವಾರರು ಧೂಳಿನಲ್ಲಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಜನ ಸಾಮಾನ್ಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ಮುಖ್ಯವಾಗಿ ಬಹು ಚಕ್ರವಾಹನಗಳು ಸಂಚರಿಸಿದಾಗ ಹೆಚ್ಚಾಗಿ ಧೂಳು ಮೇಲೇಳುತ್ತಿದೆ.

ಇದರಿಂದ ಸಣ್ಣ ವಾಹನಗಳು, ಬೈಕ್ ಸವಾರು, ರಸ್ತೆ ಪಕ್ಕದಲ್ಲಿನ ಅಂಗಡಿಯವರು ಹಿಂಸೆ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.
ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊಂಡು ನಾಲ್ಕೈದು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ರಸ್ತೆಯ ಅವ್ಯವಸ್ಥೆ ಕಂಡು PWD ಅಧಿಕಾರಿಗಳಿಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.








