Uttara Kannada | ಕಡಲತೀರಕ್ಕೆ ಬರುತ್ತಿವೆ ಗೊಬ್ರ ಮೀನುಗಳು
ಉತ್ತರ ಕನ್ನಡ : ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ.
ಇದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದೇ ತಮ್ಮ ಬೋಟುಗಳನ್ನು ಬಂದರುಗಳಲ್ಲೇ ಲಂಗರು ಹಾಕಿ ಕಾದು ಕುಳಿತ್ತಿದ್ದಾರೆ.
ಈ ನಡುವೆ ಮುರುಡೇಶ್ವರ, ಮಾನಿವಕುರ್ವಾ ಬಂದರುಗಳಲ್ಲಿ ಗೊಬ್ರ ಮೀನುಗಳು ರಾಶಿ ರಾಶಿಯಾಗಿ ದಡಕ್ಕೆ ಬರುತ್ತಿವೆ.

ಇವುಗಳನ್ನು ಮುರಿಯೂ ಅಂತ ಸ್ಥಳೀಯರು ಕರೆಯುತ್ತಾರೆ.
ಈ ಮೀನುಗಳು ಮಳೆಗಾಲದಲ್ಲಿ ಕಡಲಿನ ಆಳದಲ್ಲಿ, ಕಲ್ಲುಗಳ ನಡುವೆ ಜೀವಿಸುತ್ತಿರುತ್ತವೆ.
ಆದ್ರೆ ಇದೇ ಮೊದಲ ಬಾರಿಗೆ ದಡಕ್ಕೆ ಬಂದು ಬೀಳುತ್ತಿವೆ. ಇದರಿಂದ ಮೀನುಗಾರರು ಅಚ್ಚರಿಗೆ ಒಳಗಾಗಿದ್ದಾರೆ.








