Kho Kho Player | ಮೆದುಳು ಜ್ವರಕ್ಕೆ ಬಲಿಯಾದ ಕ್ರೀಡಾಪಟು!
ಖೋ ಖೋ ಆಟಗಾರ ವಿನಯ್ ಇನ್ನಿಲ್ಲ
ತೀರ್ಥಹಳ್ಳಿ ಮೂಲದ ವಿನಯ್ ಕೊನೆಯುಸಿರು
ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಸಾವು
ಭಾರತ ತಂಡವನ್ನು ಪ್ರತಿನಿಧಿಸಿದ್ದ ವಿನಯ್
ಉಡುಪಿ : ಮೆದುಳು ಜ್ವರದಿಂದ ಬಳಲುತ್ತಿದ್ದ ಖೋ ಖೋ ಆಟಗಾರ ತೀರ್ಥಹಳ್ಳಿ ಮೂಲದ ವಿನಯ್ ಮೃತಪಟ್ಟಿದ್ದಾರೆ.
ಖೋ ಖೋ ಆಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ವಿನಯ್ ಉತ್ತಮ ಆಟಗಾರ ಎನಿಸಿಕೊಂಡಿದ್ದರು.
ಕಳೆದ ಒಂದು ವಾರದಿಂದ ವಿನಯ್ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದ್ರೆ ಜ್ವರ ತೀವ್ರವಾಗಿದ್ದು, ಆಗಸ್ಟ್ 8 ರಂದು ತಡರಾತ್ರಿ ವಿನಯ್ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿನಯ್ ಅವರು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಖೋ ಖೋ ತಂಡದಲ್ಲಿ ಆಡಿದ್ದರು.
ಈ ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡಿದ್ದ ವಿನಯ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೂಡ ನೀಡಿತ್ತು.








