Priyank Kharge ಅವರೇ ಮಾತಾಡಬೇಕಾದ್ರೆ ನಾಲಿಗೆ ಮೇಲೆ ಹಿಡಿತ ಇರಲಿ
ಕಲಬುರಗಿ : ಮಾತಾಡಬೇಕಾದ್ರೆ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಲಂಚ ಮಂಚ ಹೇಳಿಕೆ ಕಲಬುರಗಿಯಲ್ಲಿ ಮಾತನಾಡಿದ ರಾಜಕುಮಾರ ಪಾಟೀಲ್, ನಿಮ್ಮ ಮನೆಯಲ್ಲೂ ಅಕ್ಕ- ತಂಗಿಯರು ಮಂಚ ಹತ್ತಿ ನೌಕರಿಗೆ ಹೋಗಿದ್ದಾರಾ .?
ಮಾತಾಡಬೇಕಾದ್ರೆ ನಾಲಿಗೆ ಮೇಲೆ ಹಿಡಿತ ಇರಲಿ. ಮಂಚ ಹತ್ತಿ ನೌಕರಿಗೆ ಹೋಗಿರುವ ಒಂದೇ ಒಂದು ಉದಾಹರಣೆ ಕೊಡಿ ಎಂದು ಸವಾಲು ಹಾಕಿದ್ದಾರೆ.

ಈ ಹೇಳಿಕೆಯಿಂದ ಮಹಿಳೆಯರಿಗೆ ಪ್ರಿಯಾಂಕ್ ಅಗೌರವ ತೋರಿದ್ದಾರೆ. ಈ ಹೇಳಿಕೆಯಿಂದ ಕುಟುಂಬಗಳಲ್ಲಿ ಬಿರುಕು ಮೂಡುತ್ತದೆ. ಈ ರೀತಿ ನೀಚ ಮಾತು ಹೇಳೋದು ಅವರಿಗೆ ಗೌರವತರಲ್ಲ.
ಹೆಣ್ಣು ಮಕ್ಕಳನ್ನು ಗೌರವದಿಂದ ನೋಡಿ. ಬಾಯಿ ಚಪಲಕ್ಕೆ ಏನೇನೋ ಹೇಳಿಕೆ ಕೊಡಬೇಡಿ. ಈ ರೀತಿ ಹೇಳಿಕೆ ಕೊಟ್ಟು ಕೀಳುಮಟ್ಟದ ಪ್ರಚಾರ ಪಡಿಯಬೇಡಿ. ಈಗಲೇ ರಾಜ್ಯದ ಮಹಿಳೆಯ ಕ್ಷಮೆ ಕೇಳಿ ಎಂದು ಒತ್ತಾಯಿಸಿದ್ದಾರೆ.








