KIMS | ಕಣ್ಣಿನ ಕೆಳಗೆ ಸಿಲುಕಿದ್ದ ಟೂತ್ ಬ್ರಶ್
ಹಾನಗಲ್ ನ ಹಿರೂರು ಗ್ರಾಮದಲ್ಲಿ ಘಟನೆ
ಹುಬ್ಬಳ್ಳಿಯ ಕಿಮ್ಸ್ ವೈದ್ಯರಿಂದ ಶಸ್ತ್ರಚಿಕಿತ್ಸೆ
ಮಹಿಳೆಯ ಕಣ್ಣಿನ ಕೆಳಗೆ ಸಿಲುಕಿದ ಬ್ರಶ್
ನೇತ್ರಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಶಸ್ತ್ರಚಿಕಿತ್ಸೆ
ಹುಬ್ಬಳ್ಳಿ : ಕಿಮ್ಸ್ ಆಸ್ಪತ್ರೆಯ ವೈದ್ಯರು 28 ವರ್ಷದ ಮಹಿಳೆಯೊಬ್ಬರ ಕಣ್ಣಿನ ಕೆಳಗೆ ಸಿಲುಕಿದ್ದ ಮುರಿದ ಟೂತ್ ಬ್ರಶ್ ವೊಂದರನ್ನು ಹೊರ ತೆಗೆದಿದ್ದಾರೆ.
ಆಗಸ್ಟ್ 14 ರಂದು ಹಾನಗಲ್ ನ ಹಿರೂರು ಗ್ರಾಮದ ಗೃಹಿಣಿ ವಿನೋದಾ ತಳವರ್ ಹಲ್ಲು ಉಜ್ಜುವಾಗ ಇದ್ದಕ್ಕಿಂತೆ ಟೂತ್ ಬ್ರಷ್, ಆಕೆಯ ಕಣ್ಣಿನ ಕೆಳಗೆ ಸಿಲುಕಿದೆ. ಅದನ್ನ ಕುಟುಂಬಸ್ಥರು ಹೊರತೆಗೆಯಲು ಪ್ರಯತ್ನಿಸಿದಾಗ ಬ್ರಶ್ ಮುರಿದಿದೆ.
ಕೂಡಲೇ ಅವರನ್ನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಶಿಫಾರಸ್ಸು ಮಾಡಿದ್ದಾರೆ.

ಅಲ್ಲಿನ ವೈದ್ಯರು ಸಿಟಿ ಸ್ಕ್ಯಾನ್ ಮಾಡಿ, ಸಿಟಿ ಆಂಜಿಯೋ ಗ್ರಾಮ್ ಮಾಡಿದಾಗ ಆಕೆಯ ಕಣ್ಣಿನ ಕೆಳಗೆ ಬ್ರಶ್ ಸಿಲುಕಿರುವುದು ಗೊತ್ತಾಗಿದೆ.
ನಂತರ ನೇತ್ರಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಬ್ರಷ್ ಅನ್ನು ಹೊರ ತೆಗೆದಿದ್ದಾರೆ.








