SALARY HIKE | ಇವರಿಗೆಲ್ಲಾ ಸ್ಯಾಲರಿ ಹೆಚ್ಚಳ-ಬೋನಸ್ ಗಿಫ್ಟ್
ಉದ್ಯೋಗಿಗಳಿಗೆ ಬಂಪರ್ ನ್ಯೂಸ್
ಸೆಪ್ಟೆಂಬರ್ ನಿಂದ ವಿಪ್ರೋದಲ್ಲಿ ಸಂಬಳ ಹೆಚ್ಚಳ
ನುರಿತ ಉದ್ಯೋಗಿಗಳ ವಲಸೆ ನಿಲ್ಲಿಸಲು ಕ್ರಮ
ಸಂಬಳ ಹೆಚ್ಚಳ ಮುಂದಾದ ಟಿಸಿಎಸ್ ಕಂಪನಿಗಳು
ಐಟಿ ವಲಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹೆಚ್ಚಿನ ಅಟ್ರಿಷನ್ ದರ ದಾಖಲಾಗಿದ್ದು, ಇದು ಟೆಕ್ ಕಂಪನಿಗಳಿಗೆ ತಲೆನೋವಾಗಿದೆ. ಹೀಗಾಗಿ ನುರಿತ ಉದ್ಯೋಗಿಗಳು ವಲಸೆ ಹೋಗುವುದನ್ನ ತಡೆಯಲು ಟಿಸಿಎಸ್ ನಂತರ ಕಂಪನಿಗಳು ಸಂಬಳ ಹೆಚ್ಚಳ ಮತ್ತು ಬೋನಸ್ ಘೋಷಿಸುವುದನ್ನ ಕಡ್ಡಾಯಗೊಳಿಸಿವೆ.
ವರದಿಗಳ ಪ್ರಕಾರ ತಮ್ಮ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ವಿಪ್ರೋ ವೇತನ ಹೆಚ್ಚಳ ಮಾಡಲು ಮುಂದಾಗಿದೆಯಂತೆ. ವೇತನ ಹೆಚ್ಚಳದ ಕುರಿತು ನಮ್ಮ ಹಿಂದಿನ ಘೋಷಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಉದ್ಯೋಗಿಗಳ ವೇತನ ಹೆಚ್ಚಳವು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ವಿಪ್ರೋ ತಿಳಿಸಿದೆ.
ಅದೇ ರೀತಿ ಇನ್ಫೋಸಿಸ್ ಕೂಡ ಹೆಚ್ಚಿನ ಅಟ್ರಿಷನ್ ದರದ ಹೊರತಾಗಿಯೂ ಸಂಬಳವನ್ನು ಹೆಚ್ಚಿಸಲು ಮುಂದಾಗಿದೆ. ಆದ್ರೆ ಈ ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 27.7 ಕ್ಕೆ ಹೋಲಿಸಿದ್ರೆ ಜೂನ್ 2022 ತ್ರೈಮಾಸಿಕದಲ್ಲಿ 28.4 ಶೇಕಡಾಕ್ಕೆ ಅಟ್ರಿಷನ್ ದರ ಏರಿಕೆಯಾಗಿದೆ. ಇದನ್ನ ಕಡಿಮೆ ಮಾಡುವ ವಿಶ್ವಾಸವನ್ನು ಕಂಪನಿಗಳು ಹೊಂದಿವೆ.