Deepak Chahar | ವಿಶ್ವಕಪ್ ಗೆ ಆಯ್ಕೆ ಆಗೋದು ನನ್ನ ಕೈಯಲ್ಲಿ ಇಲ್ಲ
ನಾವು ತುಂಬಾ ದಿನಗಳ ಕಾಲ ತಂಡದಿಂದ ದೂರವಿದ್ದರೇ ನಮ್ಮ ಸ್ಥಾನವನ್ನು ಬೇರೋಬ್ಬರು ಭರ್ತಿ ಮಾಡುತ್ತಾರೆ. ಒಂದು ವೇಳೆ ಅವರು ಮಿಂಚಿದರೇ ತಂಡದಲ್ಲಿ ಸ್ಥಾನ ಗಟ್ಟಿಯಾಗುತ್ತದೆ. ಈ ಇಂತಹ ಸಂದರ್ಭದಲ್ಲಿ ನಾವು ಮತ್ತೆ ಟೀಂ ಇಂಡಿಯಾಗೆ ವಾಪಸ್ ಆದ್ರೆ ಪ್ರತಿ ಅವಕಾಶವನ್ನು ಬಳಸಿಕೊಳ್ಳಬೇಕು. ಉತ್ತಮ ಪ್ರದರ್ಶನ ನೀಡಬೇಕು. ಹೀಗಾಗಿ ತುಂಬಾ ದಿನಗಳ ಬಳಿಕ ತಂಡಕ್ಕೆ ವಾಪಸ್ ಆದ್ರೆ ಒತ್ತಡ ಇದ್ದೇ ಇರುತ್ತದೆ. ನನ್ನ ಮೇಲೆ ಹೆಚ್ಚು ನಿರೀಕ್ಷೆಗಳಿವೆ. ಅವುಗಳನ್ನು ಹೇಗೆ ಮುಟ್ಟಬೇಕು ಅನ್ನೋ ವಿಚಾರ ಮಾತ್ರ ನನ್ನ ಕೈಯಲ್ಲಿರುತ್ತದೆ. ಇನ್ನುಳಿದ ವಿಷಯಗಳಲ್ಲಿ ನಾನೇನು ಮಾಡಲಾಗದು ಎಂದು ಟೀಂ ಇಂಡಿಯಾದ ವೇಗಿ ದೀಪಕ್ ಚಹಾರ್ ಹೇಳಿದ್ದಾರೆ.

ಆರು ತಿಂಗಳ ಬಳಿಕ ದೀಪಕ್ ಚಹಾರ್ ಟೀಂ ಇಂಡಿಯಾಗೆ ವಾಪಸ್ ಆಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಚಹಾರ್ ಮೂರು ವಿಕೆಟ್ ಪಡೆದು ಮಿಂಚಿದರು.
ಇದು ಹೀಗಿದ್ದರೇ ಸುದೀರ್ಘ ಕಾಲ ತಂಡದಿಂದ ದೂರವಿದ್ದ ದೀಪಕ್ ಚಹಾರ್ ಏಷ್ಯಾ ಕಪ್ ಗೆ ಪ್ರಧಾನ ತಂಡದಲ್ಲಿ ಸ್ಥಾನ ಪಡೆದಿಲ್ಲ. ಕೇವಲ ಸ್ಟಾಂಡ್ ಬೈ ಆಟಗಾರರಾಗಿದ್ದಾರೆ.
ಅದೇ ಸಮಯದಲ್ಲಿ ತಂಡಕ್ಕೆ ಹೊಸದಾಗಿ ತಂಡಕ್ಕೆ ಎಂಟ್ರಿ ಕೊಟ್ಟ ಫಾಸ್ಟ್ ಬೌಲರ್ ಗಳಾದ ಅರ್ಷ್ ದೀಪ್ ಸಿಂಗ್, ಅವೇಶ್ ಖಾನ್ ಪ್ರಧಾನ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೀಪಕ್ ಚಹಾರ್ ಮಾತನಾಡುತ್ತಾ, ಗಾಯದಿಂದ ತಂಡದಿಂದ ದೂರವಾಗಿದ್ದೇ ನಾವು ತಂಡದಲ್ಲಿ ಪಡೆಯದೇ ಇರುವುದಕ್ಕೆ ಕಾರಣವೆಂದು ಹೇಳಿದ್ದಾರೆ.








