Rahul Dravid | ರಾಹುಲ್ ದ್ರಾವಿಡ್’ಗೆ ಕೊರೋನಾ ದೃಢ
ಏಷ್ಯಾಕಪ್ ಗೂ ಮುನ್ನಾ ಭಾರತಕ್ಕೆ ಹಿನ್ನಡೆ
ದುಬೈಗೆ ತೆರಳದ ಕೋಚ್ ರಾಹುಲ್ ದ್ರಾವಿಡ್
ಏಷ್ಯಾಕಪ್ 2020 ಆಗಸ್ಟ್ 27 ರಿಂದ ಆರಂಭ
ದ್ರಾವಿಡ್ ಸ್ಥಾನದಲ್ಲಿ ವಿವಿಎಸ್ ಲಕ್ಷ್ಮಣ್ ದುಬೈಗೆ
ಏಷ್ಯಾಕಪ್ 2022 ಕ್ಕೂ ಮುನ್ನ ಟೀಂ ಇಂಡಿಯಾಗೆ ಭಾರಿ ಹಿನ್ನಡೆಯಾಗಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಅವರಿಗೆ ಸೋಂಕು ಕಾಣಿಸಿಕೊಂಡಿರುವ ಕಾರಣ ಅವರು ಏಷ್ಯಾಕಪ್ ಮಿಸ್ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಅವರು ಯುಎಇಗೆ ಹೋಗುವುದಿಲ್ಲ ಎಂದು ವರದಿಯಾಗಿದೆ.
ಮಂಗಳವಾರ ಬೆಳಗ್ಗೆ ಭಾರತದ ಕ್ರಿಕೆಟ್ ತಂಡ ದುಬೈಗೆ ತೆರಳಿದಾಗ ಅವರು ಕಾಣಲಿಲ್ಲ. ಈ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.

ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಅವರು ಯುಎಇಯಲ್ಲಿ ಹಂಗಾಮಿ ಮುಖ್ಯ ಕೋಚ್ ನ ಜವಾಬ್ದಾರಿಯನ್ನು ಪಡೆಯಬಹುದು.
ಅಂದಹಾಗೆ ಏಷ್ಯಾಕಪ್ 2022 ಆಗಸ್ಟ್ 27 ರಿಂದ ಆರಂಭವಾಗಲಿದೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಆಗಸ್ಟ್ 28 ರಂದು ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ.








