Asia Cup 2022 : ಶ್ರೀಲಂಕಾ ವಿರುದ್ಧ ಗೆದ್ದ ಅಫ್ಘಾನ್ !
ಏಷ್ಯಾಕಪ್ 2022ರ ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಶ್ರೀಲಂಕಾ ತಂಡ ಎಂಟು ವಿಕೆಟ್ ಗಳಿಂದ ಸೋಲು ಅನುಭವಿಸಿದೆ.
106 ರನ್ ಗಳ ಅಲ್ಪಮೊತ್ತದ ಗುರಿಯೊಂದಿಗೆ ಮೈದಾನಕ್ಕೆ ಇಳಿದ ಅಫ್ಘಾನಿಸ್ತಾನ ತಂಡದ ಓಪನರ್ ಗಳಾದ ಹಜ್ರತುಲ್ಲಾ ಜಜಾಯ್, ರಹ್ಮಾನುಲ್ಲಾ ಗುರ್ಬಾಜ್ 83 ರನ್ ಗಳ ಜೊತೆಯಾಟವನ್ನಾಡಿದರು.

ಇದರೊಂದಿಗೆ ಅಫ್ಘಾನಿಸ್ತಾನ ತಂಡ ಎರಡು ವಿಕೆಟ್ ಗಳನ್ನು ಕಳೆದುಕೊಂಡು 10.1 ಓವರ್ ಗಳಲ್ಲಿ ಗುರಿ ಮುಟ್ಟಿತು.
ಅಫ್ಘಾನ್ ಪರ ಹಜ್ರಾತುಲ್ಲಾ ಜಜಾಯ್ 37 ರನ್, ಗುರ್ಬಾಜ್ 40 ರನ್ ಗಳನ್ನು ಗಳಿಸಿದರು. ಶ್ರೀಲಂಕಾ ಬೌಲರ್ ಗಳಲ್ಲಿ ಹಸರಂಗ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನಾ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡದ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಅಫ್ಘಾನ್ ಬೌಲರ್ ಗಳ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ 105 ರನ್ ಗಳಿಗೆ ಆಲೌಟ್ ಆಯ್ತು.
ಅಫ್ಘಾನ್ ಪರ ಫಜಲ್ವಾಕ್ ಫರೂಖಿ ಮೂರು ವಿಕೆಟ್ ಪಡೆದ್ರೆ ನಬಿ, ಮುಜಿಬ್ ತಲಾ ಎರಡು ವಿಕೆಟ್ ಪಡೆದರು.
ಶ್ರೀಲಂಕಾ ಬ್ಯಾಟರ್ ಗಳಲ್ಲಿ ಭಾನುಕ ರಾಜಪಕ್ಸೆ ಮಾತ್ರ 38 ರನ್ ಗಳನ್ನು ಗಳಿಸಿದರು.








