Migraines | ಮೈಗ್ರೇನ್ ಸಮಸ್ಯೆಗೆ ಪರಿಹಾರ
ಆಕ್ಯುಪ್ರೆಶರ್ ಪಾಯಿಂಟ್ ನಲ್ಲಿ ಒತ್ತಡ ಹಾಕುವುದು
ಎಸೆನ್ಶಿಯಲ್ ಆಯಿಲ್ ಬಳಕೆ ಮಾಡುವುದು
ಐಸ್ ಪ್ಯಾಕ್ – ಕೋಲ್ಡ್ ಪ್ಯಾಕ್ ಬಳಕೆ ಮಾಡುವುದು
ಶುಂಠಿ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಸೇವನೆ
ಸಾಮಾನ್ಯವಾಗಿ ನಮಗೆ ಆಗಾಗ ತಲೆ ನೋವು ಬರುತ್ತೆ. ಆದ್ರೆ ಕೆಲವರಿಗೆ ದೀರ್ಫ ಕಾಲವಾಗಿ ತಲೆನೋವು ಕಾಡುತ್ತದೆ.
ಅದನ್ನ ಮೈಗ್ರೇನ್ ಎಂದು ಕರೆಯಲಾಗುತ್ತದೆ. ಈ ಮೈಗ್ರೇನ್ ಸಮಸ್ಯೆ ಅನುವಂಶಿಯವಾಗಿ ಅಥವಾ ಮಾನಸಿಕವಾಗಿ ಯಾವುದೋ ಒಂದು ವಿಚಾರವನ್ನು ತಲೆಗೆ ಹಚ್ಚಿಕೊಂಡು ಅತಿಯಾದ ಒತ್ತಡವನ್ನು ಅನುಭವಿಸಿದ್ದಾಗ ಬರುತ್ತದೆ.
ಇದರ ಲಕ್ಷಣಗಳು : ವಾಕರಿಗೆ, ವಾಂತಿ, ಕಣ್ಣು ಮಂಜಾಗುವುದು, ಕೈ ಕಾಲು ಹಿಡಿದುಕೊಳ್ಳುವುದು, ಮುಳ್ಳು ಚುಚ್ಚಿದಂತೆ ಅನುಭವ. ಬೆಳಕು ಮತ್ತು ಶಬ್ದದ ಸೂಕ್ಷ್ಮತೆ ಕಾಣಬಹುದು.
ಇದಕ್ಕೆ ಪರಿಹಾರಗಳು ಹೀಗಿವೆ : ಮೈಗ್ರೇನ್ ತಲೆ ನೋವಿನ ಪರಿಹಾರಕ್ಕೆ ನೀವು ನಿಮ್ಮ ಹೆಬ್ಬೆರಳು ಮತ್ತು ತೋರು ಬೆರಳಿನ ಮಧ್ಯಭಾಗದಲ್ಲಿ ಸುಮಾರು 5 ರಿಂದ 6 ನಿಮಿಷಗಳ ಕಾಲ ಭದ್ರವಾಗಿ ಒತ್ತಿಹಿಡಿದು ಕೊಂಡಿರಬೇಕು. ಹೀಗೆ ಮಾಡಿದ್ದಲ್ಲಿ ನೋವು ಕಡಿಮೆಯಾಗುತ್ತದೆ.

ನಿಮ್ಮ ತಲೆ ನೋವಿನ ಸಮಸ್ಯೆಗೆ ಶುಂಠಿಯಲ್ಲಿ ಪರಿಹಾರವಿದೆ. ಸ್ವಲ್ಪ ಶುಂಠಿ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರ ಜೊತೆಗೆ ಶುಂಠಿ ಚಹಾ ಕೂಡ ಸೇವನೆ ಮಾಡಿ
ನಿಮ್ಮ ತಲೆ ನೋವಿನ ಸಮಸ್ಯೆ ನಿವಾರಣೆಗೆ ಐಸ್ ಪ್ಯಾಕ್ ಅಥವಾ ಕೋಲ್ಡ್ ಪ್ಯಾಕ್ ಬಳಕೆ ಮಾಡಿ. ಒಂದು ಶುದ್ಧ ವಾದ ಹತ್ತಿ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಅದ್ದಿ ಹಣೆಯ ಮೇಲ್ಭಾಗದಲ್ಲಿ ಸ್ವಲ್ಪ ಹೊತ್ತು ಇಟ್ಟುಕೊಳ್ಳಬಹುದು. ಈ ಕೋಲ್ಡ್ ಕಂಪ್ರೆಸ್ಸಿಂಗ್ ವಿಧಾನವನ್ನು ಹಣೆಯ ಮೇಲೆ ಸುಮಾರು 15 ರಿಂದ 20 ನಿಮಿಷಗಳು ಮಾಡುವುದು ಒಳ್ಳೆಯದು.
ಮೈಗ್ರೇನ್ ಸಮಸ್ಯೆಗೆ ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ ಬಳಕೆ ಮಾಡಿ. ಅದರಿಂದ ಪರಿಣಾಮಕಾರಿಯಾಗಿ ನಿಮ್ಮ ತಲೆನೋವು, ಅತಿಯಾದ ಮಾನಸಿಕ ಒತ್ತಡ ಮತ್ತು ಮಾನಸಿಕ ಆತಂಕವನ್ನು ದೂರ ಮಾಡಬಹುದು.








