Road Safety World Series : ಮತ್ತೆ ಮೈದಾನಕ್ಕೆ ಕ್ರಿಕೆಟ್ ದೇವರು
ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರು ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ.
ಸಚಿನ್ ಜೊತೆಗೆ ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್ ರಂತಹ ಲೆಜೆಂಡ್‌ಗಳು ಕೂಡ ಕಣಕ್ಕಿಳಿಯಲಿದ್ದಾರೆ.
ಹೌದು..!! ಮಾಜಿ ಕ್ರಿಕೆಟಿಗರನ್ನು ಒಳಗೊಂಡ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ಭಾರತದ ದಿಗ್ಗಜ ಕ್ರಿಕೆಟ್ ಆಟಗಾರರು ಭಾಗವಹಿಸಲಿದ್ದಾರೆ.
ಇದು ಟಿ20 ಸರಣಿಯ 2 ನೇ ಸೀಸನ್ ಆಗಿರಲಿದೆ. ಸೆಪ್ಟೆಂಬರ್ 10 ರಿಂದ ಅಕ್ಟೋಬರ್ 1 ರವರೆಗೆ ಈ ಟೂರ್ನಿ ನಡೆಯಲಿದೆ. ಕಾನ್ಪುರ, ರಾಯ್‌ಪುರ, ಇಂದೋರ್ & ಡೆಹ್ರಾಡೂನ್‌ನಲ್ಲಿ ಪಂದ್ಯಗಳು ನಡೆಯಲಿವೆ.

ಲೆಜೆಂಡ್ಸ್ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಇಂಗ್ಲೆಂಡ್ & ನ್ಯೂಜಿಲೆಂಡ್ ತಂಡಗಳು ಭಾಗವಹಿಸಲಿವೆ. ಇಂಡಿಯಾ ಲೆಜೆಂಡ್ಸ್ ತಂಡವನ್ನು ಸಚಿನ್ ತೆಂಡುಲ್ಕರ್ ಮುನ್ನಡೆಸಲಿದ್ದಾರೆ.
ಭಾರತದ ತಂಡ ಹೀಗಿದೆ
ಸಚಿನ್ ತೆಂಡೂಲ್ಕರ್ (ನಾಯಕ), ರಾಜೇಶ್ ಪವಾರ್, ವಿನಯ್ ಕುಮಾರ್, ಯೂಸುಫ್ ಪಠಾಣ್, ನಾಮ ಓಜಾ, ಸುಬ್ರಮಣಿಯನ್ ಬದರಿನಾಥ್, ನೋಯೆಲ್ ಡೇವಿಡ್, ಮನ್‌ಪ್ರೀತ್ ಗೋನಿ, ಮುನಾಫ್ ಪಟೇಲ್, ಪ್ರಗ್ಯಾನ್ ಓಜಾ, ಇರ್ಫಾನ್ ಪಠಾಣ್, ಮೊಹಮ್ಮದ್ ಕೈಫ್, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ರವಿ ಗಾಯಕವಾಡ.








