Serena Williams retires | ವಿದಾಯ ಹೇಳಿದ ಟೆನಿಸ್ ಲೋಕದ ತಾರೆ!
ಸೋಲಿನೊಂದಿಗೆ ಸೆರೆನಾ ವಿಲಿಯಮ್ಸ್ ವಿದಾಯ
ಅಜ್ಲಾ ಟೊಮ್ ಜಾನೋವಿಕ್ ಎದುರು ಸೋಲು
23 ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತೆ
ಇದು ಮೋಜಿನ ಸವಾರಿ ಎಂದ ಸೆರೆನಾ ವಿಲಿಯಮ್ಸ್
23 ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ವಿಜೇತೆ ಮತ್ತು ನ್ಯೂಯಾರ್ಕ್ ನಲ್ಲಿ ಆರು ಬಾರಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ
ಅವರು ಯುಎಸ್ ಓಪನ್ ಪಂದ್ಯಾವಳಿಯಲ್ಲಿ ವೃತ್ತಿ ಬದುಕಿನ ಕೊನೆಯ ಪಂದ್ಯವನ್ನಾಡಿದರು.
ವನಿತಾ ಸಿಂಗಲ್ಸ್ ನಲ್ಲಿ ಆಸ್ಟ್ರೇಲಿಯಾದ ಅಜ್ಲಾ ಟೊಮ್ ಜಾನೋವಿಕ್ ಎದುರು ಅವರು ಸೋಲು ಕಂಡು ಭಾವುಕ ವಿದಾಯ ಹೇಳಿದ್ದಾರೆ.

ಈ ಪಂದ್ಯದ ಮೂರು ಸುತ್ತಿನಲ್ಲಿ ಹಣಾಹಣಿಯಲ್ಲಿ 7-5, 6-7, 6-1 ಸೆಟ್ ಗಳಿಂದ ಸೋಲು ಕಂಡಿದ್ದಾರೆ.
ಇದು ಮೋಜಿನ ಸವಾರಿಯಾಗಿದೆ ಎಂದಿರುವ ಸೆರೆನಾ, ನನ್ನ ಜೀವನದಲ್ಲಿ ನಾನು ಮಾಡಿದ ಅತ್ಯಂತ ನಂಬಲಾಗದ ಸವಾರಿ ಮತ್ತು ಪ್ರಯಾಣವಾಗಿದೆ.
ನನ್ನ ಜೀವನದಲ್ಲಿ ಮುಂದೆ ಸಾಗು ಸೆರೆನಾ ಎಂದು ಹೇಳಿರುವ ಪ್ರತಿಯೊಬ್ಬರಿಗೂ ನಾನು ತುಂಬಾ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ವಿದಾಯ ಹೇಳಿದ್ದಾರೆ.
ಅಂದಹಾಗೆ ಮಹಿಳಾ ಟೆನಿಸ್ ಅಸೋಸಿಯೇಷನ್ 319 ವಾರಗಳ ಕಾಲ ಸಿಂಗಲ್ಸ್ ನಲ್ಲಿ ವಿಶ್ವದ ನಂಬರ್ 1 ಶ್ರೇಯಾಂಕವನ್ನು ಸೆರೆನಾ ಹೊಂದಿದ್ದರು.








