BJP Janaspandana | ಹಾಡು, ನೃತ್ಯಗಳ ಖರ್ಚಿನಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬಹುದಿತ್ತು
ಬೆಂಗಳೂರು : ಬಿಜೆಪಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಚಿವರಾದ ಮುನಿರತ್ನ, ಎಂಟಿಬಿ ನಾಗರಾಜ್, ಶಾಸಕ ವಿಶ್ವನಾಥ್ ಅವರು ಡ್ಯಾನ್ಸ್ ಮಾಡಿದ್ದಾರೆ.
ಟ್ವಿಟ್ಟರ್ ನಲ್ಲಿ ಮುನಿರತ್ನ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಸಚಿವ “ಮನಿ”ರತ್ನರವರ 40% ಕಮಿಷನ್ ಲೂಟಿಗೆ ಯಾವುದೇ ಅಡೆತಡೆ ಇಲ್ಲದಾಗಿದೆ. ತೋಟಗಾರಿಕಾ ಇಲಾಖೆಯ ಹನಿ ನೀರಾವರಿ ಗುತ್ತಿಗೆದಾರರಷ್ಟೇ ಅಲ್ಲ, ಇತರ ಕಾಮಗಾರಿಗಳಲ್ಲೂ ಅಧಿಕಾರಿಗಳಿಗೆ ಕಮಿಷನ್ ಪಡೆಯುವ ಟಾಸ್ಕ್ ನೀಡಿದ್ದು ಸಚಿವ ಮುನಿರತ್ನರ ಸಾಧನೆ. ಈ ಸಾಧನೆಗಾಗಿಯೇ #BJPBrashtotsava ನೃತ್ಯ ನಡೆಸುತ್ತಿದ್ದೀರಾ ಬಿಜೆಪಿ ಎಂದು ಪ್ರಶ್ನಿಸಿದೆ.

ಬಿಜೆಪಿ ಹೇಳಿದ್ದು – ಗೋರಕ್ಷಣೆ ಮಾಡಿದ್ದು – ಗೋವಿನ ಹೆಸರಲ್ಲಿ ಕಮಿಷನ್ ಭಕ್ಷಣೆ. ಸರ್ಕಾರ ಗೋಶಾಲೆಗಳನ್ನು ನಿರ್ಮಿಸುವುದು ದೂರದ ಮಾತು ಕನಿಷ್ಠ ಗೋವುಗಳಿಗೆ ನ್ಯಾಯಯುತವಾಗಿ ಮೇವನ್ನೂ ಕೊಡಲಿಲ್ಲ. ಮೇವು ಪೂರೈಕೆದಾರರ ಹಣ ಬಿಡುಗಡೆಗೆ 8.5% ಕಮಿಷನ್ ಕೇಳಿದ ಬಿಜೆಪಿಯ ನಡೆ ಗೋಭಕ್ಷಣೆಗಿಂತ ಭಿನ್ನವೇನಲ್ಲ.
40% ಕಮಿಷನ್ ಹಣದಲ್ಲಿ ನಡೆಯುತ್ತಿರುವ #BJPBrashtotsava ಕ್ಕೆ ಕೋಟಿ ಕೋಟಿ ಹಣ ಸುರಿಯಲಾಗುತ್ತಿದೆ. ಸಮಾವೇಶದ ವೇದಿಕೆ ಅಲಂಕಾರದ ಖರ್ಚಿನಲ್ಲಿ ಮೃತ ಅಂಕಿತಾಳಿಗೆ ಪರಿಹಾರ ನೀಡಬಹುದಿತ್ತು. ಹಾಡು, ನೃತ್ಯಗಳ ಖರ್ಚಿನಲ್ಲಿ ಬೆಂಗಳೂರಿನ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬಹುದಿತ್ತು. ರಸ್ತೆ ಗುಂಡಿಗೆ ಬಲಿಯದವರಿಗೆ ಪರಿಹಾರ ನೀಡಬಹುದಿತ್ತು ಎಂದು ಹೇಳಿದೆ.








