Asia Cup 2022 | ಆಗ ಕೊಹ್ಲಿ ಅಲ್ಲ… ಈಗ ರೋಹಿತ್ ಅಲ್ಲ.. ಸೋಲಿಗೆ ಇದೇ ಪ್ರಮುಖ ಕಾರಣ
ಕಳೆದ ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೋಲಿಗೆ ಕಾರಣ ವಿರಾಟ್ ಕೊಹ್ಲಿ. ಕ್ಯಾಪ್ಟನ್ ಅವರನ್ನ ಬದಲಿಸಬೇಕು ಅಂತಾ ಎಲ್ಲರೂ ಹೇಳಿದ್ರು.
ಈಗ ರೋಹಿತ್ ಶರ್ಮಾ ಕೂಡ ಏಷ್ಯಾಕಪ್ ಗೆದ್ದಿಲ್ಲ ಅಲ್ಲವಾ ಎಂದು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಆಕಾಶ್ ಚೋಪ್ರಾ ಹೇಳಿದ್ದಾರೆ.
ಮೆಗಾ ಟೂರ್ನಿಯಲ್ಲಿ ಭಾರತ ಸೋಲಿಗೆ ಕ್ಯಾಪ್ಟನ್ ಗಳು ಕಾರಣವಲ್ಲ, ಅಸಲಿ ಸಮಸ್ಯೆ ತಂಡ ಆಯ್ಕೆ ಮಾಡುವುದರಲ್ಲಿಯೇ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಿಶ್ವಕಪ್ ನಲ್ಲಿ ಈ ಬಾರಿ ಏಷ್ಯಾಕಪ್ ನಲ್ಲಿ ಭಾರತ ತಂಡದ ಸೋಲಿಗೆ ಕ್ಯಾಪ್ಟನ್ಸಿ ಕಾರಣವಲ್ಲ.
ತಂಡದ ಆಯ್ಕೆಯೇ ಪ್ರಧಾನವಾದ ಸಮಸ್ಯೆಯಾಗಿದೆ. ಅದೇ ರೀತಿ ಅಂತಿಮ ತಂಡದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದೇ ಕಾರಣವಾಗಿದೆ.
ಪದೇ ಪದೇ ತಂಡದಲ್ಲಿ ಬದಲಾವಣೆಗಳನ್ನು ಮಾಡಿದ್ದು ಸರಿಯಲ್ಲ. ಶ್ರೀಲಂಕಾ ಪಾಕಿಸ್ತಾನ ಒಂದೆರಡು ಬದಲಾವಣೆಗಳನ್ನು ಮಾಡಿದ್ದವು ಎಂದಿದ್ದಾರೆ.








