Flying Bike | ವಿಶ್ವದ ಮೊದಲ ‘ಹಾರುವ ಬೈಕ್’!
ಹಾರುವ ಬೈಕ್ ಪಾದಾರ್ಪಣೆ ಮಾಡಿದ ಯುಎಸ್
ಡೆಟ್ರಾಯಿಟ್ ಆಟೋ ಶೋನಲ್ಲಿ ಪಾದಾರ್ಪಣೆ
ಹೋವರ್ ಬೈಕ್ ಗಂಟೆಗೆ 62 ಮೈಲು ಗರಿಷ್ಠ ವೇಗ
ಹೋವರ್ ಬೈಕ್ ಗೆ ಆರು ಕೋಟಿಗೂ ಅಧಿಕ ವೆಚ್ಚ
ವಿಶ್ವದ ಮೊದಲ ಹಾರುವ ಬೈಕ್ ಲೋಕಾರ್ಪಣೆಗೊಂಡಿದೆ. ಜಪಾನಿನ ಸ್ಟಾರ್ಟ್ ಅಪ್ ಟೆಕ್ನಾಲಜಿಸ್ ತಯಾರಿಸಿದ ಹೋವರ್ ಬೈಕ್ ಯುನೈಟೆಡ್ ಸ್ಟೇಟ್ಸ್ ನಲ್ಲಿ ಡೆಟ್ರಾಯಿಟ್ ಆಟೋ ಶೋನಲ್ಲಿ ಪಾದಾರ್ಪಣೆ ಮಾಡಿದೆ.
ರಾಯಿಟರ್ಸ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಕ್ಲಿಪ್ ನಲ್ಲಿ ವ್ಯಕ್ತಿಯೊಬ್ಬ ಬೈಕ್ ಅನ್ನು ಕೆಳಗಿಳಿಸಿ ಅದನ್ನು ಗಾಳಿಯಲ್ಲಿ ನಡೆಸುತ್ತಿರುವುದನ್ನ ತೋರಿಸುತ್ತದೆ.
ಹೋವರ್ ಬೈಕ್ ಅನ್ನು ಎಚ್ಚರಿಕೆಯಿಂದ ನೆಲದ ಮೇಲೆ ಇಳಿಸಲಾಗಿದೆ.
ಮಕ್ಲಿಪ್ ಪ್ರಪಂಚದ ಮೊದಲ ಹಾರುವ ಬೈಕ್ ನ ವೈಶಿಷ್ಟ್ಯಗಳನ್ನು ತೋರಿಸುತ್ತದೆ.
ಈ ಬೈಕ್ ಗಂಟೆಗೆ 62ಮೈಲುಗಳ ಗರಿಷ್ಠ ವೇಗದೊಂದಿಗೆ 40 ನಿಮಿಷಗಳವರೆಗೆ ಹಾರಬಲ್ಲದು.
ಈ ಬೈಕ್ ಈಗಾಗಲೇ ಜಪಾನ್ ನಲ್ಲಿ ಮಾರಾಟವಾಗಿದ್ದು, ಮುಂದಿನ ವರ್ಷ ಅಮೆರಿಕಾದಲ್ಲಿ ಮಾರಾಟವಾಗಲಿದೆ.
ಈ ಬೈಕ್ ಗೆ ಆರು ಕೋಟಿಗೂ ಹೆಚ್ಚು ವೆಚ್ಚವಾಗುತ್ತದೆ.