Congress | ಬಿಜೆಪಿಯ ಎದುರೇ ಹಳೆಯ ಅಕ್ರಮದ ಭೂತ
ಬೆಂಗಳೂರು : #40PercentSarkara ದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧದ ಬಿಜೆಪಿಯ ಬ್ಲಾಕ್ಮೇಲ್ ತಂತ್ರ ಫಲಿಸದು.ಕಾಂಗ್ರೆಸ್‌ನ ಹಳೆಯ ಪ್ರಕರಣಗಳನ್ನು ಹಿಡಿಯುತ್ತೇವೆ ಎಂದಿದ್ದ ಬಿಜೆಪಿಯ ಎದುರೇ ಈಗ ಹಳೆಯ ಅಕ್ರಮದ ಭೂತ ಬಂದು ನಿಂತಿದೆ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಟ್ವಿಟ್ಟರ್ ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಮದಕರಿ ನಾಯಕ ವಸತಿ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ 6500 ಕೋಟಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸುತ್ತೇವೆ ಎಂದಿತ್ತು ಬಿಜೆಪಿ.ಈಗಾಗಲೇ ಇರುವ ವಸತಿ ಯೋಜನೆಗಳಿಗೆ ಹಣ ನೀಡಿಲ್ಲ, ಪ್ರವಾಹ ಸಂತ್ರಸ್ತರಿಗೆ ಮನೆ ಕೊಟ್ಟಿಲ್ಲ. ಕೊಟ್ಟ ಮಾತನ್ನೂ ಪೂರೈಸಿಲ್ಲ. ಇಂತಹಾ ಮಹಾಮೋಸ ಮಾಡಿದ್ದೇಕೆ ಬಿಜೆಪಿ?
#40PercentSarkara ದ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧದ ಬಿಜೆಪಿಯ ಬ್ಲಾಕ್ಮೇಲ್ ತಂತ್ರ ಫಲಿಸದು.ಕಾಂಗ್ರೆಸ್‌ನ ಹಳೆಯ ಪ್ರಕರಣಗಳನ್ನು ಹಿಡಿಯುತ್ತೇವೆ ಎಂದಿದ್ದ ಬಿಜೆಪಿಯ ಎದುರೇ ಈಗ ಹಳೆಯ ಅಕ್ರಮದ ಭೂತ ಬಂದು ನಿಂತಿದೆ.BSY, BYV & ಎಸ್.ಟಿ ಸೋಮಶೇಖರ್ ವಿರುದ್ದದ ಪ್ರಕರಣಕ್ಕೆ ಉತ್ತರವೇನು, ಕ್ರಮವೇನು ಬಿಜೆಪಿ?
ಬಿ.ಎಸ್.ಯಡಿಯೂರಪ್ಪ ಅವರು ಈಗ ವಿಚಾರಣೆ ಎದುರಿಸಬೇಕಿದೆ, ಯತ್ನಾಳ್ ಅವರು ಹೇಳಿದಂತೆ ಕೇಂದ್ರ ಸಂಸದೀಯ ಮಂಡಳಿಗೆ ರಾಜೀನಾಮೆ ನೀಡುವರೇ? ಬಿ.ವೈ.ವಿಜಯೇಂದ್ರ ಅವರು ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವರೇ ಅಥವಾ ಜೈಲಿನಿಂದಲೇ ಹುದ್ದೆ ನಿರ್ವಹಿಸುವರೇ? ಎಸ್ ಟಿ ಸೋಮಶೇಖರ್ ಅವರ ರಾಜೀನಾಮೆ ಯಾವಾಗ ಬಿಜೆಪಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.