Snake bite | ವ್ಯಕ್ತಿಯ ತುಟಿಗೆ ಕಚ್ಚಿದ ಹಾವು : ಮೈ ಝುಮ್ ಎನಿಸುವ ವಿಡಿಯೋ
ವ್ಯಕ್ತಿಯೊಬ್ಬ ಹಾವಿನ ಜೊತೆ ಸರಸವಾಡಲು ಹೋಗಿ ಹಾವಿನಿಂದ ತುಟಿಗೆ ಕಚ್ಚಿಸಿಕೊಂಡಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹಾವು ಹಿಡಿದು ರಕ್ಷಿಸುವ ವೇಳೆ ಹುಡುಗನ ಮೇಲೆ ಹಾವು ದಾಳಿಗೆ ಮುಂದಾಗಿದೆ. ಈ ವೇಳೆ ಅಡ್ಡ ಬಂದ ಅಲೆಕ್ಸ್ ಎಂಬಾತನಿಗೆ ಹಾವು ಕಚ್ಚಿದೆ.
ಭದ್ರಾವತಿಯ ಬೊಮ್ಮನ್ ಕಟ್ಟೆ ಬಾರ್ ಲೈನ್ ನಲ್ಲಿ ಮದುವೆ ಮನೆಯಲ್ಲಿ ಕಾಣಿಸಿಕೊಂಡ ಎರಡು ಹೆಣ್ಣುನಾಗರವನ್ನ ಕರ್ನಾಟಕ ಸ್ನೇಕ್ ಕ್ಯಾಚರ್ಸ್ ಸಂಘದ ಅಲೆಕ್ಸ್ ಮತ್ತು ರೋನಿ ಎಂಬುವರು ರಕ್ಷಿಸಿದ್ದಾರೆ.
ಈ ವೇಳೆಯಲ್ಲಿ ಒಂದು ಹಾವಿಗೆ ಗಾಯವಾಗಿತ್ತು.ಬೊಮ್ಮನ್ ಕಟ್ಟೆಯ ಬಸ್ ನಿಲ್ದಾಣಕ್ಕೆ ಬರುವ ವೇಳೆಗೆ ರೋನಿ ಯಾವ ಹಾವಿಗೆ ಗಾಯವಾಗಿದೆ ನೋಡೋಣವೆಂದು ಬಾಟಲು ತೆಗೆದಿದ್ದಾನೆ.

ಚೆನ್ನಾಗಿರುವ ಹಾವಿನ ಬಾಟಲ್ ತೆಗೆದ ಕಾರಣ ರೋನಿಗೆ ನಾಗರ ಹಾವು ದಾಳಿಗೆ ಮುಂದಾಗಿದೆ.
ಇತ್ತ ಅಲೆಕ್ಸ್ ಹಾವಿಗೆ ಮುತ್ತಿಕ್ಕಲು ಮುಂದಾಗಿದ್ದಾನೆ. ಈ ವೇಳೆ ಅಲೆಕ್ಸ್ ನ ಮೇಲ್ತುಟಿ ಮತ್ತು ಕೆಳ ತುಟಿಗೆ ಕಚ್ಚಿದೆ.
ಈ ನೋವಿನಲ್ಲೂ ಹಾವನ್ನ ರಕ್ಷಿಸಿ ಕಾಡಿಗೆ ಬಿಟ್ಟು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಂತರ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಮೂರು ದಿನದ ಬಳಿಕ ಅಲೆಕ್ಸ್ ಮನೆಗೆ ವಾಪಾಸಾಗಿದ್ದಾರೆ.
ಈ ಘಟನೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕ ನೆಟ್ಟಿಗರು ರಿಪ್ ಎಂದು ಹೇಳುತ್ತಿದ್ದಾರೆ. ಅಲೆಕ್ಸ್ ಚೆನ್ಬಾಗಿ ಆಗಿದ್ದಾನೆ.
ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಪಡೆದುಕೊಳ್ಳುತ್ತಿರುವ ಬಗ್ಗೆ ಅಲೆಕ್ಸ್ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ.








