ADVERTISEMENT
Monday, September 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Kantara | ತುಳುನಾಡಿನ ಸಂಸ್ಕೃತಿಯ ರಾಯಭಾರಿ ರಿಷಬ್ ಶೆಟ್ಟಿ..!

Mahesh M Dhandu by Mahesh M Dhandu
October 1, 2022
in Cinema, Newsbeat, ಮನರಂಜನೆ
kantara

kantara

Share on FacebookShare on TwitterShare on WhatsappShare on Telegram

Kantara | ತುಳುನಾಡಿನ ಸಂಸ್ಕೃತಿಯ ರಾಯಭಾರಿ  ರಿಷಬ್ ಶೆಟ್ಟಿ..!

ಇವ್ರು ದುಡ್ಡು ಮಾಡುವುದಕ್ಕೆ ಸಿನಿಮಾ ಮಾಡುತ್ತಿಲ್ಲ.. ಆದ್ರೆ ಇವ್ರು ಸಿನಿಮಾದಿಂದಲೇ ದುಡ್ಡು ಮಾಡುತ್ತಾರೆ. ಜನರ ಪ್ರೀತಿಯನ್ನೂ ಗಳಿಸುತ್ತಾರೆ. ಎರಡುವರೆ, ಎರಡು ಮುಕ್ಕಾಲು ಗಂಟೆ ಮನಸ್ಸಿಗೆ ಮುದವನ್ನು ನೀಡ್ತಾರೆ. ಒಂದು ದಿನ ಪೂರ್ತಿ ಅವರ ಸಿನಿಮಾದ ಹ್ಯಾಂಗ್ ಓವರ್ ನಲ್ಲಿರುವಂತೆಯೂ ಮಾಡ್ತಾರೆ. ಸಿನಿಮಾ ಮತ್ತು ಸಿನಿಮಾದ ಕಥೆಯೊಳಗೆ ಇವ್ರಿದ್ರೂ ಅವರೊಂದಿಗೆ ನಮ್ಮನ್ನು ಪರವಶಮಾಡಿಕೊಳ್ಳುವಂತೆಯೂ ಮಾಡ್ತಾರೆ.
ಇವ್ರು ಸ್ಯಾಂಡಲ್ ವುಡ್ ನ ತ್ರಿಬಲ್ ಆರ್ ಸ್ಟಾರ್ ಗಳು…. ಸುಮಾರು ಎರಡು ದಶಕಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ತ್ರಿಬಲ್ ಆರ್ ಖ್ಯಾತಿಯ ಹೀರೋಯಿನ್ ಗಳಿದ್ದರು. ನೆನಪಿದೆಯಾ, ರಕ್ಷಿತಾ, ರಾಧಿಕಾ ಮತ್ತು ರಮ್ಯಾ. ಇದೀಗ ತ್ರಿ ಬಲ್ ಆರ್ ಖ್ಯಾತಿಯ ನಿರ್ದೇಶಕರು ಇದ್ದಾರೆ. ಹೀರೋಗಳು ಇದ್ದಾರೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ. ಇವ್ರು ಸ್ಯಾಂಡಲ್ ವುಡ್ ನ ಶೆಟ್ಟಿ ಗ್ಯಾಂಗ್ ಕೂಡ ಹೌದು.

Related posts

ಮಾತ ತುಳುವೆರೆಗ್‌ ಎನ್ನ ಮೋಕೆದ ಸೊಲ್ಮೆಲು: ಅಂದು ಹಾಕಿದ ಅಡಿಪಾಯ ಇಂದು ಸಾಕಾರ, ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದಕ್ಕೆ ಸಿದ್ದರಾಮಯ್ಯ ಹೆಮ್ಮೆ

ಮಾತ ತುಳುವೆರೆಗ್‌ ಎನ್ನ ಮೋಕೆದ ಸೊಲ್ಮೆಲು: ಅಂದು ಹಾಕಿದ ಅಡಿಪಾಯ ಇಂದು ಸಾಕಾರ, ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದಕ್ಕೆ ಸಿದ್ದರಾಮಯ್ಯ ಹೆಮ್ಮೆ

September 21, 2026
ನಿಯಮ ಮೀರಿ ಪ್ರತಿಮೆ ಸ್ಥಾಪಿಸಬೇಡಿ, ಅಭಿಮಾನಕ್ಕಿಂತ ನಿಯಮವೇ ಮೊದಲು: ರಾತ್ರೋರಾತ್ರಿ ಪ್ರತಿಮೆ ಸ್ಥಾಪನೆ ಸಿದ್ದರಾಮಯ್ಯ ಅವರಿಗೆ ಮಾಡಿದ ಅಪಮಾನ ಎಂದ ಖರ್ಗೆ.

ನಿಯಮ ಮೀರಿ ಪ್ರತಿಮೆ ಸ್ಥಾಪಿಸಬೇಡಿ, ಅಭಿಮಾನಕ್ಕಿಂತ ನಿಯಮವೇ ಮೊದಲು: ರಾತ್ರೋರಾತ್ರಿ ಪ್ರತಿಮೆ ಸ್ಥಾಪನೆ ಸಿದ್ದರಾಮಯ್ಯ ಅವರಿಗೆ ಮಾಡಿದ ಅಪಮಾನ ಎಂದ ಖರ್ಗೆ.

September 21, 2026

ನೈಜತೆ, ಸೃಜನಶೀಲತೆಯೊಂದಿಗೆ ನಮ್ಮ ಕಣ್ಣ ಮುಂದೆ ನಡೆಯುವ ದಿನ ನಿತ್ಯದ ಘಟನೆಗಳೇ ಇವ್ರ ಸಿನಿಮಾ ಕಥೆಯ ಜೀವಾಳ. ನಮ್ಮ ನೆಲದ ಸಂಸ್ಕೃತಿ, ಆಚಾರ ವಿಚಾರಗಳೇ ಇವ್ರ ಸಿನಿಮಾದ ಬಂಡವಾಳ.. ಸ್ನೇಹ, ನಂಬಿಕೆ, ವಿಶ್ವಾಸ, ಬದ್ಧತೆ ಮತ್ತು ತನ್ನತನವೇ ಇವ್ರ ಯಶಸ್ಸಿನ ಸಿಕ್ರೇಟ್. ಪ್ರೇಕ್ಷಕನ ಅಂತರಂಗವನ್ನು ಅರಿತುಕೊಂಡು ಸಿನಿಮಾ ಮಾಡುವುದು ಅಷ್ಟೊಂದು ಸುಲಭವಿಲ್ಲ. ಪ್ರತಿ ಸಿನಿಮಾದ ಪ್ರತಿಯೊಂದು ಫ್ರೇಮ್ ಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸುವುದರ ಹಿಂದೆ ಇವರ ಶ್ರಮ ಸಾಕಷ್ಟಿದೆ. ಅಷ್ಟೇ ಅಲ್ಲ ತಾವು ಮಾಡಿರುವ ಪ್ರೀತಿಯ ಸಿನಿಮಾವನ್ನು ಯಾವ ರೀತಿ ಪ್ರಚಾರ ಮಾಡಬೇಕು.. ಪ್ರೇಕ್ಷಕರಿಗೆ ಯಾವ ರೀತಿ ತಲುಪಿಸಬೇಕು ಎಂಬುದು ಕೂಡ ಇವ್ರಿಗೆ ಚೆನ್ನಾಗಿ ಗೊತ್ತು. ಹೀಗಾಗಿಯೇ ಹೇಳಿದ್ದು, ಇವ್ರು ದುಡ್ಡಿಗಾಗಿ ಸಿನಿಮಾ ಮಾಡಲ್ಲ.. ಸಿನಿಮಾದಿಂದ ಇವ್ರು ದುಡ್ಡು ಮಾಡುತ್ತಾರೆ. ಯಾಕಂದ್ರೆ ಇವ್ರು ಸಿನಿಮಾವನ್ನು ಅಷ್ಟೊಂದು ಪ್ರೀತಿಸ್ತಾರೆ. ಹಾಗಂತ ಇವ್ರು ಸಿನಿಮಾ ಕುಟುಂಬದಿಂದ ಬಂದವರಲ್ಲ. ಆದ್ರೆ ಈಗ ಇವ್ರಿಗೆ ಸಿನಿಮಾ ರಂಗವೇ ಕುಟುಂಬವಾಗಿದೆ.

Kantara Rishab Shetty is the cultural ambassador of Tulunad
Kantara Rishab Shetty is the cultural ambassador of Tulunad

ಅಂದ ಹಾಗೇ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅವರು ಈ ವರ್ಷದ ಮೂರು ಚಿತ್ರಗಳನ್ನು ನೋಡಿದಾಗ ಅಚ್ಚರಿಯೂ ಆಗುತ್ತೆ. ಯಾವುದೇ ಸ್ಟಾರ್ ಗಳು ಇಲ್ಲದ ಸಿನಿಮಾ ಪ್ರೇಕ್ಷಕರನ್ನು ಮನಸ್ಸನ್ನು ಗೆಲ್ಲುತ್ತದೆ ಅಂದ್ರೆ ಅವರ ಅಭಿನಯ ಮತ್ತು ಚಿತ್ರದ ಮೇಕಿಂಗ್, ಚಿತ್ರಕಥೆಯೇ ಪ್ರಮುಖ ಕಾರಣ.

ಇದೀಗ ಕಾಂತಾರ ಚಿತ್ರವೂ ಅಷ್ಟೇ..! ಇದು ಒಂದು ದಂತ ಕಥೆ ಎಂಬ ಟ್ಯಾಗ್ ಲೈನ್ ಹಾಕೊಂಡಿದೆ ಚಿತ್ರ ತಂಡ. ಆದ್ರೆ ಕಾಂತಾರ ಚಿತ್ರದ ಕಥೆ ಅಥವಾ ಚಿತ್ರಕಥೆ ದಂತ ಕಥೆಯಲ್ಲ.. ಅದು ಕರಾವಳಿಯಲ್ಲಿ ಈ ಹಿಂದೆ ನಡೆದಿದ್ದ ಮತ್ತು ಈಗಲೂ ನಡೆಯುತ್ತಿರುವ ಪ್ರತಿನಿತ್ಯದ ಘಟನೆಗಳು. ಅಷ್ಟರ ಮಟ್ಟಿಗೆ ಕಾಂತಾರ ಚಿತ್ರದ ಕಥೆ ಗಟ್ಟಿತನದಿಂದ ಕೂಡಿದೆ. ಮೇಲ್ನೋಟಕ್ಕೆ ಇದು ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷವಾಗಿದ್ರೂ ನಮ್ಮ ನೆಲದ ಸಂಸ್ಕೃತಿ ಮತ್ತು ಆಚಾರ ವಿಚಾರಗಳು ನಂಬಿಕೆಯಿಂದ ಇರುತ್ತವೆ ಎಂಬುದು ಕೂಡ ಅಷ್ಟೇ ಸತ್ಯ. ಕರಾವಳಿಯಲ್ಲಿ ದೈವರಾಧನೆಯನ್ನು ಪ್ರತಿ ಮನೆಯಲ್ಲೂ ಭಕ್ತಿಯಿಂದ ಮತ್ತು ನಂಬಿಕೆಯಿಂದ ಆರಾಧನೆ ಮಾಡುತ್ತಾರೆ. ದೈವದ ನುಡಿ ಮತ್ತು ದೈವದ ಅಭಯವೇ ಕರಾವಳಿಯ ಪ್ರತಿ ಮನೆ, ಪ್ರತಿ ಕುಟುಂಬ ಮತ್ತು ಇಡೀ ಹಳ್ಳಿಗೆ ಶ್ರೀ ರಕ್ಷೆಯಾಗಿರುತ್ತದೆ. ಅಷ್ಟರ ಮಟ್ಟಿಗೆ ಕರಾವಳಿಯಲ್ಲಿ ದೈವರಾಧನೆಯನ್ನು ನಂಬುತ್ತಾರೆ. ಕಾಂತಾರ ಚಿತ್ರದಲ್ಲೂ ಅಷ್ಟೇ.

Kantara Rishab Shetty is the cultural ambassador of Tulunad
Kantara Rishab Shetty is the cultural ambassador of Tulunad

ಪಂಜುರ್ಲಿ ದೈವದ ಅಟ್ಟಹಾಸ..ನುಡಿ ಮತ್ತು ಅಭಯವೇ ಕಾಂತಾರ ಚಿತ್ರದ ಹೈಲೈಟ್ಸ್.
ಕಾಡಂಚಿನಲ್ಲಿ ಬದುಕುವ ಜನರು, ಕೋಳಿ ಅಂಕ, ಕಂಬಳ, ಧೈವರಾಧನೆ, ಹೀಗೆ ತಮ್ಮ ನೆಲದ ಆಚಾರ – ವಿಚಾರಗಳನ್ನು ಆಚರಣೆ ಮಾಡಿಕೊಂಡು ಅದರಲ್ಲೇ ಸಂಭ್ರಮಿಸುವ ಜನರ ಚಿತ್ರಣ ಒಂದು ಕಡೆಯಾದ್ರೆ, ಸಭ್ಯನಂತೆ ನಟಿಸುವ ಕುತಂತ್ರಿ ಜಮಿನ್ದಾರನ ದಬ್ಬಾಳಿಕೆ, ಅರಣ್ಯ ಭೂಮಿಯನ್ನು ಒತ್ತುವರಿ ಮಾಡದಂತೆ ಅರಣ್ಯವನ್ನು ಸಂರಕ್ಷಣೆ ಮಾಡುವ ಅರಣ್ಯಾಧಿಕಾರಿಯ ದರ್ಪತನ, ತಮ್ಮ ನಂಬಿಕೆಯ ಪಂಜುರ್ಲಿ ದೈವದ ಅಭಯ ಮತ್ತು ಶಕ್ತಿಯಿಂದ ಧರ್ಮ ಸ್ಥಾಪನೆಯ ಸಂದೇಶದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಸೂಚಿಸುವ ಚಿತ್ರ ಕಾಂತಾರ.

ರಿಷಬ್ ಶೆಟ್ಟಿಯವರ ಅಭಿನಯಕ್ಕೊಂದು ಸೆಲ್ಯೂಟ್ ಕೊಡಲೇಬೇಕು. ಅದರಲ್ಲೂ ಕೊನೆಯ ಸುಮಾರು 20 ನಿಮಿಷ ರಿಷಬ್ ಶೆಟ್ಟಿ ಮಂತ್ರ ಮುಗ್ದರನ್ನಾಗಿಸಿದ್ದಾರೆ. ದೈವರಾಧನೆಯ ಕುಣಿತವಾಗಿರಬಹುದು.. ನೃತ್ಯವಾಗಿರಬಹುದು., ಅಥವಾ ಆವೇಶವಾಗಿರಬಹುದು.. ರಿಷಬ್ ಶೆಟ್ಟಿ ಸೈ ಎನಿಸಿಕೊಂಡಿದ್ದಾರೆ. ಯಾರ ಮನೆಯಲ್ಲಿ ದೈವರಾಧನೆ ಮಾಡುತ್ತಾರೋ ಅಂಥವರು ಥಿಯೇಟರ್ ನಲ್ಲಿ ಸಿನಿಮಾ ನೋಡ್ತಾ ಇದ್ರೆ ತಮಗೆ ಗೊತ್ತಿಲ್ಲದ ಹಾಗೇ ಕೈಮುಗಿಯುವಂತೆ ಮಾಡಿದ್ದಾರೆ ರಿಷಬ್ ಶೆಟ್ಟಿ.

Kantara Rishab Shetty is the cultural ambassador of Tulunad
Kantara Rishab Shetty is the cultural ambassador of Tulunad

ಒಂದಂತೂ ಸತ್ಯ.. ದೈವದ ನುಡಿ ಮತ್ತು ಅಭಿಯ ಯಾವತ್ತೂ ಸುಳ್ಳು ಆಗುವುದಿಲ್ಲ ಎಂಬ ನಂಬಿಕೆ ಇದೆ. ಹಾಗೇ ದೈವದ ಪಾತ್ರಧಾರಿ ಹೇಳುವ ನುಡಿಗೆ ಎಷ್ಟು ಮಹತ್ವ ಕೊಡಬೇಕೋ ಎಂಬುದು ಅವರವರಿಗೆ ಬಿಟ್ಟ ವಿಚಾರ. ಆದ್ರೆ ದೈವದ ಪಾತ್ರಧಾರಿಯಲ್ಲಿ ದೈವಾಂಶವನ್ನು ಕಾಣುವ ನಂಬಿಕೆ ನಮ್ಮ ತುಳುನಾಡಿನಲ್ಲಿದೆ. ದೈವರಾಧನೆಯಿಂದ ಒಡೆದು ಹೋಗಿದ್ದ ಕುಟುಂಬಗಳು ಒಂದಾಗುತ್ತವೆ..ಬಿರುಕು ಬಿಟ್ಟಿರುವ ಹಳ್ಳಿಯ ಜನರನ್ನು ಒಗ್ಗಟ್ಟಿನಿಂದ ಇರುವಂತೆ ಮಾಡುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ತುಳುನಾಡಿನಲ್ಲಿ ದೇವರ ಪೂಜೆಗಿಂತಲೂ ದೈವರಾಧನೆಗೆ ಹೆಚ್ಚಿನ ಮಹತ್ವ ಕೊಡ್ತಾರೆ. ಈ ಎಲ್ಲಾ ಅಂಶಗಳನ್ನು ಕಾಂತಾರ ಚಿತ್ರದಲ್ಲೂ ನೋಡಬಹುದಾಗಿದೆ.

ಒಟ್ಟಿನಲ್ಲಿ ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರದ ಮೂಲಕ ತುಳನಾಡಿನ ಸಂಸ್ಕೃತಿಯ ರಾಯಭಾರಿಯಾಗಿ ಕಂಗೊಳಿಸಿದ್ದಾರೆ.

add

Tags: filmKannadakantaraRishab Shetty
ShareTweetSendShare
Join us on:

Related Posts

ಮಾತ ತುಳುವೆರೆಗ್‌ ಎನ್ನ ಮೋಕೆದ ಸೊಲ್ಮೆಲು: ಅಂದು ಹಾಕಿದ ಅಡಿಪಾಯ ಇಂದು ಸಾಕಾರ, ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದಕ್ಕೆ ಸಿದ್ದರಾಮಯ್ಯ ಹೆಮ್ಮೆ

ಮಾತ ತುಳುವೆರೆಗ್‌ ಎನ್ನ ಮೋಕೆದ ಸೊಲ್ಮೆಲು: ಅಂದು ಹಾಕಿದ ಅಡಿಪಾಯ ಇಂದು ಸಾಕಾರ, ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಕ್ಕಿದ್ದಕ್ಕೆ ಸಿದ್ದರಾಮಯ್ಯ ಹೆಮ್ಮೆ

by Shwetha
September 21, 2026
0

ಮಂಗಳೂರು: ಕರಾವಳಿ ಜನರ ದಶಕಗಳ ಕನಸು ಹಾಗೂ ತುಳುನಾಡಿನ ಅಸ್ಮಿತೆಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ರಾಜ್ಯ...

ನಿಯಮ ಮೀರಿ ಪ್ರತಿಮೆ ಸ್ಥಾಪಿಸಬೇಡಿ, ಅಭಿಮಾನಕ್ಕಿಂತ ನಿಯಮವೇ ಮೊದಲು: ರಾತ್ರೋರಾತ್ರಿ ಪ್ರತಿಮೆ ಸ್ಥಾಪನೆ ಸಿದ್ದರಾಮಯ್ಯ ಅವರಿಗೆ ಮಾಡಿದ ಅಪಮಾನ ಎಂದ ಖರ್ಗೆ.

ನಿಯಮ ಮೀರಿ ಪ್ರತಿಮೆ ಸ್ಥಾಪಿಸಬೇಡಿ, ಅಭಿಮಾನಕ್ಕಿಂತ ನಿಯಮವೇ ಮೊದಲು: ರಾತ್ರೋರಾತ್ರಿ ಪ್ರತಿಮೆ ಸ್ಥಾಪನೆ ಸಿದ್ದರಾಮಯ್ಯ ಅವರಿಗೆ ಮಾಡಿದ ಅಪಮಾನ ಎಂದ ಖರ್ಗೆ.

by Shwetha
September 21, 2026
0

ಕಲಬುರಗಿ: ಕಲಬುರಗಿ ನಗರದ ಹೃದಯಭಾಗದಲ್ಲಿರುವ ಹೈಕೋರ್ಟ್ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪನೆ ಮತ್ತು ಅದರ ಬೆನ್ನಲ್ಲೇ ನಡೆದ ತೆರವು ಕಾರ್ಯಾಚರಣೆ ಈಗ ರಾಜ್ಯ...

ಹೇ ಧನಂಜಯ ಬಾರೋ ಇಲ್ಲಿಗೆ ಅಂದಿದ್ದೇ ಮುಳುವಾಯ್ತು:ಪೊಲೀಸರ ವಿರುದ್ಧವೇ ತೊಡೆ ತಟ್ಟಿದ್ದ ಸಿಂಹಗೆ ಈಗ ಎಫ್‌ಐಆರ್ ಸಂಕಷ್ಟ-ನಾವು ಬಗ್ಗಲ್ಲ ಜಗ್ಗಲ್ಲ ಅಂದ್ರು ಆರ್ ಅಶೋಕ್

ಹೇ ಧನಂಜಯ ಬಾರೋ ಇಲ್ಲಿಗೆ ಅಂದಿದ್ದೇ ಮುಳುವಾಯ್ತು:ಪೊಲೀಸರ ವಿರುದ್ಧವೇ ತೊಡೆ ತಟ್ಟಿದ್ದ ಸಿಂಹಗೆ ಈಗ ಎಫ್‌ಐಆರ್ ಸಂಕಷ್ಟ-ನಾವು ಬಗ್ಗಲ್ಲ ಜಗ್ಗಲ್ಲ ಅಂದ್ರು ಆರ್ ಅಶೋಕ್

by Shwetha
September 21, 2026
0

ಮೈಸೂರು: ಟಿ ನರಸೀಪುರದಲ್ಲಿ ನಡೆದ ಗಣೇಶ ಶೋಭಾಯಾತ್ರೆ ವೇಳೆ ಪೊಲೀಸ್ ಅಧಿಕಾರಿಗಳ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿ, ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಡಿ ಮಾಜಿ ಸಂಸದ ಪ್ರತಾಪ್...

ರೈತರ ಹಿತಕ್ಕಾಗಿ ಹಾಲಿನ ದರ ಏರಿಕೆ ಅನಿವಾರ್ಯ: ಗ್ರಾಹಕರಿಗೆ ದರ ಏರಿಕೆಯ ಬಿಸಿ ಮುಟ್ಟಿಸಿದ ಡಿ ಕೆ ಶಿವಕುಮಾರ್ ಸರ್ಕಾರ!

ರೈತರ ಹಿತಕ್ಕಾಗಿ ಹಾಲಿನ ದರ ಏರಿಕೆ ಅನಿವಾರ್ಯ: ಗ್ರಾಹಕರಿಗೆ ದರ ಏರಿಕೆಯ ಬಿಸಿ ಮುಟ್ಟಿಸಿದ ಡಿ ಕೆ ಶಿವಕುಮಾರ್ ಸರ್ಕಾರ!

by Shwetha
September 21, 2026
0

ಬೆಂಗಳೂರು: ರಾಜ್ಯದ ಜನಸಾಮಾನ್ಯರ ಮೇಲೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಮುನ್ಸೂಚನೆ ಸಿಕ್ಕಿದೆ. ನಂದಿನಿ ಹಾಲಿನ ದರವನ್ನು ಶೀಘ್ರದಲ್ಲೇ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಗಂಭೀರ...

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

by Shwetha
September 21, 2026
0

ಬೆಂಗಳೂರು: ರಾಜಾಜಿನಗರದ ಶಾಸಕ ಎಸ್ ಸುರೇಶ್ ಕುಮಾರ್ ಅವರು ಸಜ್ಜನ ಎಂಬ ಮುಖವಾಡ ಧರಿಸಿದ ದುರ್ಜನ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ತೀವ್ರವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram