Bellary | ಮೇಲ್ಛಾವಣಿ ಕುಸಿದು ಶಾಲಾ ಬಾಲಕಿ ಸಾವು
ಬಳ್ಳಾರಿ : ಜಿಲ್ಲೆಯ ಶಂಕರಬಂಡೆ ಗ್ರಾಮದಲ್ಲಿ ಶಾಲಾ ಮೇಲ್ಛಾವಣಿ ಕುಸಿದು ಮೃತಪಟ್ಟ ವಿದ್ಯಾರ್ಥಿನಿ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಕಳೆದ 6 ತಿಂಗಳ ಹಿಂದೆಯೇ ಶಾಲಾ ಮೇಲ್ಛಾವಣಿ ಕುಸಿದು ಹಾಜಿರಾ ಬೀ ಎಂ ಬಾಲಕಿ ಆಸತ್ರೆ ಸೇರಿದ್ದಳು.
ಸೆಪ್ಟೆಂಬರ್ 27 ರಂದು ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವಿಗೀಡಾಗಿದ್ದಳು.

ಈ ಕುರಿತು ಶಾಲಾ ಮುಖ್ಯೋಪಾಧ್ಯಾಯರು, ಡಿಡಿಪಿಐ, ಜಿಲ್ಲಾಧಿಕಾರಿಗಳು, ಶಾಸಕರು ಮತ್ತು ಸಚಿವರನ್ನು ಭೇಟಿಯಾಗಿ ಪರಿಹಾರಕ್ಕೆ ಒತ್ತಾಯಿಸಲಾಗಿತ್ತು.
ಬಾಲಕಿಯ ತಂದೆ ಮಾಬು ಸುಬಾನಿ, ತಾಯಿ ಆಶಾ ಬೀ ಅವರೂ ಸಹ ಹಲವಾರು ಬಾರಿ ಸಂಚರಿಸಿ ವಿನಂತಿಸಿದ್ದರು
ಇದುವರೆಗೂ ಪರಿಹಾರ ನೀಡಿಲ್ಲ. ಹೀಗಾಗಿ ಪರಿಹಾರ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸಿದೆ .








