karawar | ಕಾರನ್ನ ಅಡ್ಡಗಟ್ಟಿ ವ್ಯಾಪಾರಿ ಮೇಲೆ ಹಲ್ಲೆ
ಕಾರವಾರ : ಅಡಕೆ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ, ಆತನ ಮೇಲೆ ಹಲ್ಲೆ ನಡಸಿ 50 ಲಕ್ಷ ರೂಪಾಯಿಯನ್ನು ದರೋಡೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದಿದೆ.
ಜಾವಿದ್ ಖಾನ್ ಎಂಬಾತ ಮೇಲೆ ಹಲ್ಲೆ ನಡೆಸಲಾಗಿದ್ದು, ಈತ ಖರೀದಿಸಲೆಮದು ಬೆಳಗಾವಿಗೆ ತೆರಳಿದ್ದರು.
ಈ ಹಿನ್ನೆಲೆಯಲ್ಲಿ 50 ಲಕ್ಷ ರೂಪಾಯಿಗಳನ್ನು ಕಾರಿನಲ್ಲಿಟ್ಟುಕೊಂಡು ಹೋಗಿದ್ದರು.

ಈ ಬಗ್ಗೆ ಮಾಹಿತಿ ಇದ್ದ ದುಷ್ಕರ್ಮಿಗಳು ಜಾವಿದ್ ಖಾನ್ ಅವರ ಕಾರನ್ನು ಅಡ್ಡಗಟ್ಟಿ ಪಿಸ್ತೂಲ್ ತೋರಿಸಿ ಹೆದರಿಸಿದ್ದಾರೆ. ಅಲ್ಲದೆ ಕಾರಿನ ಚಕ್ರವನ್ನು ಪಂಚರ್ ಮಾಡಿದ್ದಾರೆ.
ಅದಾದ ಬಳಿಕ ಜಾವಿದ್ ಗೆ ರಾಡಿನಿಂದ ಹೊಡೆದು ಹಲ್ಲೆ ನಡೆಸಿ ಕಾರಿನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಇನ್ನು ಈ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








