T20 world cup 2022 | ನೆದರ್ ಲ್ಯಾಂಡ್ ಪಂದ್ಯಕ್ಕೆ ಈ ಪ್ಲೇಯರ್ ಗೆ ಕೋಕ್
ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-12 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿರುವ ಟೀಂ ಇಂಡಿಯಾ, ತನ್ನ 2ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡದ ಸವಾಲು ಎದುರಿಸೋಕ್ಕೆ ಸಜ್ಜಾಗಿದೆ.
ಪಾಕಿಸ್ತಾನದ ವಿರುದ್ಧದ ಮಹತ್ವದ ಫೈಟ್ ನಲ್ಲಿ ವಿರಾಟ್ ಕೊಹ್ಲಿ ಅವರ ಕೆಚ್ಚೆದೆಯ ಬ್ಯಾಟಿಂಗ್ನಿಂದಾಗಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿತು.
ಹೈ-ವೋಲ್ಟೇಜ್ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿರುವ ರೋಹಿತ್ ಪಡೆ, ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಕೆಲ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ನೆದರ್ಲೆಂಡ್ಸ್ ತಂಡದ ಸವಾಲು ಎದುರಿಸೋಕ್ಕೆ ತಯಾರಾಗಿರುವ ಭಾರತ, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಮೂಲಕ ತಂಡದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಪ್ರಮುಖವಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯದ ವೇಳೆ ಸ್ವಲ್ಪಮಟ್ಟಿನ ಬಳಲಿದಂತೆ ಕಾಣಿಸಿಕೊಂಡಿದ್ದ ಹಾರ್ದಿಕ್ ಅವರನ್ನ ನೆದರ್ಲೆಂಡ್ಸ್ ವಿರುದ್ಧ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ ಅವರ ಜಾಗದಲ್ಲಿ ಆಲ್ರೌಂಡರ್ಗಳಾದ ದೀಪಕ್ ಹೂಡ ಅವರನ್ನ ಕಣಕ್ಕಿಳಿಸುವ ನಿರೀಕ್ಷೆ ಇದೆ.
ಅಥವಾ ಸದ್ಯ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಫಿಕ್ಸ್ ಆಗಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ಪ್ರಮುಖ ಬೌಲರ್ ಎಂದು ಪರಿಗಣಿಸಿ, ಅಕ್ಷರ್ ಪಟೇಲ್ ಅವರಿಗೆ ವಿಶ್ರಾಂತಿ ನೀಡಿ ದೀಪಕ್ ಹೂಡಾ ಅವರನ್ನು ಪ್ಲೇಯಿಂಗ್ ಇಲೆವೆನ್ ಗೆ ತರಬಹುದು. ಆಗ ಟೀಂ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್ ಮತ್ತಷ್ಟು ಬಲಿಷ್ಟವಾಗಿರಲಿದೆ.
ಇದಲ್ಲದೆ ಪ್ಲೇಯಿಂಗ್ ಇಲೆವೆನ್ ಗೆ ಪಂತ್ ಅವರನ್ನ ಕರೆತಂದು ಅಕ್ಷರ್ ಪಟೇಲ್ ಗೆ ಕೋಕ್ ನೀಡಬಹುದು. ಆಗ ಪ್ಲೇಯಿಂಗ್ ಇಲೆವೆನ್ ನ ಟಾಪ್ ಆರ್ಡರ್ ನಲ್ಲಿ ಎಡ ಗೈ ಬ್ಯಾಟ್ಸ್ ಮೆನ್ ಸಿಕ್ಕಂತಾಗುತ್ತದೆ.








