Gandhadagudi – ಗಂಧದಗುಡಿ ಅಪ್ಪು ಕೊನೆ ಸಿನಿಮಾವಲ್ಲ
ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕನಸಿನಕೂಸು ಗಂಧದ ಗುಡಿ ಸಾಕ್ಷ್ಯ ಚಿತ್ರ ವಿಶ್ವದಾದ್ಯಂತ ತೆರೆಕಂಡಿದೆ.
ಈ ಸಂಬಂಧ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಗಂಧದ ಗುಡಿ ಅಪ್ಪು ಕೊನೆಯ ಸಿನಿಮಾವಲ್ಲ ಎಂದು ಹೇಳಿದ್ದಾರೆ.
ನಾನು ಸಂಜೆ ಸಿನಿಮಾ ವೀಕ್ಷಣೆ ಮಾಡುತ್ತೇನೆ. ಗಂಧದಗುಡಿ ಅಪ್ಪು ಕೊನೆಯ ಸಿನಿಮಾವಲ್ಲ.
ಇದು ಆರಂಭ, ಅಪ್ಪು ಯಾವಾಗಲೂ ನಮ್ಮ ಜೊತೆ ಇರುತ್ತಾರೆ ಎಂದು ಶಿವಣ್ಣ ಭಾವುಕರಾದರು.
ಕಾಡಿನ ಮಹತ್ವದ ಬಗ್ಗೆ ಅಪ್ಪು ತಿಳಿಸಿದ್ದು, ಅಭಿಮಾನಿಳು ಅಪ್ಪುವನ್ನ ನೋಡಲು ಬರಬೇಕು.
ಈ ಮೂಲಕ ಗೌರವ ಕೊಡಬೇಕು ಎಂದು ಶಿವರಾಜ್ ಕುಮಾರ್ ಅವರು ಮನವಿ ಮಾಡಿಕೊಂಡರು.