T20 wc 2022 – ಟಾಪ್ ರನ್ ಸ್ಕೋರರ್.. ಟಾಪ್ ವಿಕೆಟ್ ಟೇಕರ್ಸ್ ಇವರೇ
ಟಿ 20 ವಿಶ್ವಕಪ್ 2022ರ ಚಾಂಪಿಯನ್ ಯಾರು ಎಂಬೋದು ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ಟಿ20 ವಿಶ್ವಕಪ್ 2022 ಕೊನೆಯ ಹಂತಕ್ಕೆ ಬಂದಿದೆ. ಸೂಪರ್ 12 ರ ಭಾಗವಾಗಿ ಭಾನುವಾರ ನಡೆದ ಪಂದ್ಯಗಳ ಮೂಲಕ ಸೆಮೀಸ್ ತಂಡಗಳು ಫೈನಲ್ ಆಗಿವೆ.
ಮೊದಲ ಸೆಮಿ ಫೈನಲ್ ಪಂದ್ಯ ನವೆಂಬರ್ 9 ರಂದು ನಡೆಯಲಿದೆ.
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವರ್ಸಸ್ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಈ ಪಂದ್ಯ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಈ ಪಂದ್ಯ ಆರಂಭವಾಗಲಿದೆ.
ಇಲ್ಲಿಯವರೆಗೂ ಲೀಗ್ ಹಂತದ ಪಂದ್ಯಗಳು ನಡೆದಿದ್ದು, ಟಾಪ್ ರನ್ ಸ್ಕೋರರ್, ಟಾಪ್ ವಿಕೆಟ್ ಟೇಕರ್ ಯಾರು ಎಂಬ ಪಟ್ಟಿ ಇಲ್ಲಿದೆ.
ಟಾಪ್ 10 ರನ್ ಸ್ಕೋರರ್ ಗಳ ಪಟ್ಟಿಯಲ್ಲಿ ಟೀಂ ಇಂಡಿಯಾದ ಬ್ಯಾಟರ್ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ನೆದರ್ ಲ್ಯಾಂಡ್ ನ ಮಾಕ್ಸ್ ಓಡೌಡ್ ಎರಡನೇ ಸ್ಥಾನದಲ್ಲಿದ್ದಾರೆ.
ಟೀಂ ಇಂಡಿಯಾದ ಮತ್ತೊಬ್ಬ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಮೂರನೇ ಸ್ಥಾನದಲ್ಲಿದ್ದಾರೆ.
ಸೂರ್ಯ, ಕೊಹ್ಲಿ ಹೊರತು ಪಡಿಸಿ ಇನ್ನುಳಿದ ಬ್ಯಾಟರ್ ಗಳು ಕ್ವಾಲಿಫೈಯರ್ ಆಡಿದ ಬ್ಯಾಟರ್ ಗಳೇ ಇದ್ದಾರೆ.
ಆದ್ರೆ ಸೆಮಿಸ್, ಫೈನಲ್ ಮ್ಯಾಚ್ ಗಳಿದ್ದು, ಸೂರ್ಯ ಅಥವಾ ಕೊಹ್ಲಿ ಟೂರ್ನಿಯ ಟಾಪ್ ಸ್ಕೋರರ್ ಆಗುವ ಸಾಧ್ಯತೆಗಳಿವೆ.

ಇನ್ನು ಬೌಲರ್ ಗಳ ವಿಷಯಕ್ಕೆ ಬಂದರೇ ವನಿಂದು ಹಸರಂಗ ಮೊದಲ ಸ್ಥಾನದಲ್ಲಿದ್ದಾರೆ.
ಟೀಂ ಇಂಡಿಯಾದ ಯುವ ಬೌಲರ್ ಅರ್ಷ್ ದೀಪ್ ಸಿಂಗ್ ಒಂಭತ್ತನೇ ಸ್ಥಾನದಲ್ಲಿದ್ದಾರೆ.
ಟಿ 20 ವಿಶ್ವಕಪ್ 2022 ಸೂಪರ್ 12
ಅತ್ಯಧಿಕ ರನ್ ಸರದಾರರು
ವಿರಾಟ್ ಕೊಹ್ಲಿ 246 ರನ್
ಮಾಕ್ಸ್ ಒಡೌಡ್ 242 ರನ್
ಸೂರ್ಯ ಕುಮಾರ್ 225 ರನ್
ಕುಶಾಲ್ ಮೆಂಡೀಸ್ 223 ರನ್
ಸಿಕಿಂದರ್ ರಜಾ 219 ರನ್
ಅಧಿಕ ವಿಕೆಟ್ ಟೇಕರ್
ವನಿಂದು ಹಸರಂಗ 15 ವಿಕೆಟ್
ಬಾಸ್ ಡಿ ಲಿಡ್ 12 ವಿಕೆಟ್
ಬ್ಲೆಸ್ಸಿಂಗ್ ಮುಜರಬಾನಿ 12 ವಿಕೆಟ್
ಅರ್ಷ್ ದೀಪ್ ಸಿಂಗ್ 10 ವಿಕೆಟ್








