ಟೀ, ಕಾಫಿ ಮಾರಾಟ ಮಾಡಿ ಸಾರಿಗೆ ನೌಕರರಿಂದ ಪ್ರೊಟೆಸ್ಟ್ protest
ಬೆಂಗಳೂರು : ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೋಂಡಾ, ಬಜ್ಜಿ, ಟೀ, ಕಾಫಿ ಮಾಡಿ ಸಾರಿಗೆ ನೌಕರರು ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.
ನಿನ್ನೆ ಕಪ್ಪು ಪಟ್ಟಿ ಕಟ್ಟಿಕೊಂಡು ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದ ಸಾರಿಗೆ ನೌಕರರು, ಇಂದು ಮೆಜೆಸ್ಟಿಕ್ ನಲ್ಲಿ ಬೋಂಡಾ, ಬಜ್ಜಿ, ಟೀ, ಕಾಫಿ ಮಾಡಿ ಮಾರಾಟ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ರಾಜ್ಯದ ನಾನಾ ಭಾಗಗಳಲ್ಲಿ ನೌಕರರರಿಂದ ಇದೆ ಮಾದರಿಯಲ್ಲಿ ಇಂದು ಪ್ರತಿಭಟನೆ ನಡೆದಿದೆ.
ಈ ಪ್ರತಿಭಟನೆಯಲ್ಲಿ 4 ಸಾರಿಗೆ ನಿಗಮಗಳ ನೌಕರರು ಭಾಗಿಯಾಗಿದ್ದರು.