ಕೊರೊನಾ ಹೆಚ್ಚಳ : ಕೊಡಗಿನಲ್ಲಿ ಫೀಲ್ಡಿಗಿಳಿದ ಜಿಲ್ಲಾಧಿಕಾರಿ kodagu
ಮಡಿಕೇರಿ : ಕಠಿಣ ನಿಯಮಗಳ ಹೊರತಾಗಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.
ಈ ಹಿನ್ನೆಲೆ ಜಲ್ಲಾಧಿಕಾರಿ ಚಾರುಲತಾ ಸೋಮಲ್ ರಸ್ತೆಗಿಳಿದು ಮಾಸ್ಕ್ ಧರಿಸದವರಿಗೆ ದಂಡ ಹಾಕಿದ್ದಾರೆ.
ಜಿಲ್ಲಾಧಿಕಾರಿಗಳು ಇಂದು ಮಡಿಕೇರಿ ನಗರದ ಪೋಸ್ಟ್ ಆಫೀಸ್ ಬಳಿಯಿಂದ ನಗರ ಪ್ರದಕ್ಷಿಣೆ ಹಾಕಿದರು.
ಈ ವೇಳೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಾ ಒಂದು ಗಂಟೆಯಲ್ಲಿ ಎಪ್ಪತ್ತು ಜನರಿಂದ ದಂಡ ವಸೂಲಿ ಮಾಡಿದರು.
ಇನ್ನೊಂದೆಡೆ ನಗರಸಭೆಯಿಂದಲೂ ಮಡಿಕೇರಿ ನಗರದ ಕೊರೊನಾ ನಿಯಮ ಪಾಲಿಸದ ಹೋಟೆಲ್ ಮಾಲೀಕರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚನೆ ನೀಡಿದ್ದಾರೆ.










