ಜನರು ಮಾತು ಕೇಳ್ತಿಲ್ಲ… ಸೇನೆ ಕಳುಹಿಸಿ : ಜಾಖಂಡ್ ಸಿಎಂ ಕೇಂದ್ರಕ್ಕೆ ಮನವಿ
ಜಾರ್ಖಂಡ್ : ದೇಶಾದ್ಯಂತ ಕೊರೊನಾ ಹಾವಳಿ ಹೆಚ್ಚಾಗಿದೆ. 2ನೇ ಅಲೆ ಹಿಂದೆಂದಿಗಿಂತಲೂ ಭಯಾನಕವಾಗಿ ಅಪ್ಪಳಿಸಿದೆ.
ಇತ್ತ ರಾಜ್ಯ ಸರ್ಕಾರಗಳು ಏನೇ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡ್ರು ಜನ ಸರ್ಕಆರದ ಮಾತು ಕೇಳ್ತಿಲ್ಲ.
ಹೀಗಾಗಿ ಜಾರ್ಖಂಡ್ ನ ಸಿಎಂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಮಡಿದ್ದಾರೆ.
ಹೌದು.. ಕರೊನಾವೈರಸ್ ವ್ಯಾಪಕವಾಗಿ ಹರಡುತ್ತಿದ್ದರೂ ಜನ ನಮ್ಮ ಮಾತು ಕೇಳುತ್ತಿಲ್ಲ.
ಹಾಗಾಗಿ ಸೇನೆಯನ್ನೇ ಕರಿಸಲು ಯೋಚಿಸುತ್ತಿದ್ದೇವೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಹೇಳಿದ್ದಾರೆ.
ಜಾರ್ಖಂಡ್ನಲ್ಲಿ ಜನರು ಕೋವಿಡ್ ತಡೆ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ. ನಮ್ಮ ಮಾತನ್ನೂ ಕೇಳುತ್ತಿಲ್ಲ.
ಮಾಸ್ಕ್, ಸಾಮಾಜಿಕ ಅಂತರ ಎಂಬುದು ಮರಿಚಿಕೆ ಆಗಿದೆ. ಹೀಗಾಗಿ ರಕ್ಷಣಾ ಇಲಾಖೆ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇವೆ.
ಅಗತ್ಯ ಸೇನಾ ಸಿಬ್ಬಂದಿಯನ್ನು ಕಳುಹಿಸಿ ಎಂದು ಮನವಿ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಜಾರ್ಖಂಡ್ನಲ್ಲಿ ಶನಿವಾರ 3838 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 30 ಜನ ಮೃತಪಟ್ಟಿದ್ದಾರೆ.









