ಕಲಿಗಾಲ : ಪತಿಗೆ ಡೈವರ್ಸ್.. ಮಾವನ ಜತೆ ರೊಮ್ಯಾನ್ಸ್
ವಾಷಿಂಗ್ಟನ್ : ವಿವಾಹಗಳನ್ನ ಸ್ವರ್ಗದಲ್ಲಿ ನಿರ್ಧರಿಸುತ್ತಾರೆ ಅಂತ ಹೇಳಲಾಗುತ್ತದೆ. ಒಂದು ಬಾರಿ ಬ್ರಹ್ಮಗಂಟು ಬಿದ್ದರೇ ಏಳೇಳು ಜನ್ಮಗಳಲ್ಲೂ ಅವರಿಬಬ್ಬರು ಗಂಡ ಹೆಂಡತಿಯಾಗಿರ್ತಾರೆ ಅಂತ ನಂಬುತ್ತಾರೆ ಆದರೆ ಈಗ ಪರಿಸ್ಥಿತಿಗಳು ಬದಲಾಗಿವೆ.
ವೈವಾಹಿಕ ಜೀವನವು ಅವರು ಅಂದುಕೊಂಡಿದ್ದರೆ ಆ ಸಂಬಂಧವನ್ನ ಮುಂದುವರಿಸುತ್ತಾರೆ. ಇಲ್ಲವೆಂದರೇ ಡೈವರ್ಸ್ ಕಡೆ ಮುಖಮಾಡುತ್ತಾರೆ.
ಈ ನೇಪಥ್ಯದಲ್ಲಿ ತಾಜಾ ಆಗಿ ಒಂದು ವಿಚಿತ್ರ ಸಂಘಟನೆವೊಂದು ಬೆಳಕಿಗೆ ಬಂದಿದ್ದು, ಓರ್ವ ಮಹಿಳೆ ತನ್ನ ಪತಿಗೆ ವಿಚ್ಚೇಧನ ನೀಡಿ, ಮಾವ ( ಪತಿಯ ತಂದೆ) ಯನ್ನು ಮದುವೆ ಆಗಿದ್ದಾಳೆ.
ಈ ವಿಚಿತ್ರ ಘಟನೆ ಅಮೆರಿಕದಲ್ಲಿ ನಡೆದಿದೆ. ಕೆಂಟುಕಿಯ ಹಾರೊಡ್ಸ್ಬರ್ಗ್ನ 31 ವರ್ಷದ ಎರಿಕಾ ಕ್ವಿಗ್ಲೆ, ಅವರಿಗೆ ಆಕೆ 16ನೇ ವಯಸ್ಸಿನಲ್ಲಿದ್ದಾಗ ಜೆಫ್ (60) ( ಪ್ರಸ್ತುತ ಆಕೆ ಮದುವೆ ಆಗಿರುವ ವ್ಯಕ್ತಿ) ಜೊತೆ ಪರಿಚಯವಾಗಿತ್ತು.
ಜೆಫ್ ನ ಹೆಂಡತಿಯ ಮೊದಲ ಗಂಡನಿಗೆ ಜನಿಸಿದ ಹುಡುಗಿ ಹಾಗೂ ಎರಿಕಾ ಇಬ್ಬರು ಸ್ನೇಹಿತರು. ಈ ಅನುಕ್ರಮದಲ್ಲಿಯೇ ಎರಿಕಾಗೆ ಜೆಫ್ನ ಮೊದಲ ಹೆಂಡತಿ ಮಗ ಜಸ್ಟಿನ್ ಜೊತೆ ಪರಿಚಯವಾಗಿತ್ತು. ಅದು ಪ್ರೀತಿಯಾಗಿ ಬದಲಾದ ಕಾರಣ ಇವರಿಬ್ಬರು ಕೆಲವು ವರ್ಷಗಳ ಹಿಂದೆ ವಿವಾಹವಾದರು.
ಎರಿಕಾ ಮತ್ತು ಜಸ್ಟಿನ್ ಗೆ ಒಂದು ಮಗು ಕೂಡ ಜನಿಸಿದದ್ದು, ಅವರ ಸಂಬಂಧದಲ್ಲಿ ಕೆಲವು ವರ್ಷಗಳ ಕಾಲ ಸರಾಗವಾಗಿ ಸಾಗಿದೆ. ಈ ಮಧ್ಯೆ ಅವರಿಬ್ಬರ ಮದ್ಯೆ ಜಗಳವಾಗಿ ವಿಚ್ಚೇಧನ ಪಡೆದಿದ್ದಾರೆ. ಅದರ ನಂತರ ಎರಿಕಾ, ಜಸ್ಟಿನ್ ನ್ನ ಮಲತಂದೆ ಜೆಫ್ನನ್ನು ಪ್ರೀತಿಸಿದ್ದು ಈ ವಿಚಾರನ್ನ ಜೆಫ್ಗೆ ಹೇಳಿದ್ದಾರೆ. ಜೆಫ್ ಕೂಡ ಅವಳನ್ನು ಪ್ರೀತಿಸಿದ್ದು, ಇದರೊಂದಿಗೆ ಎರಿಕಾ ತನಗಿಂತ 29 ವರ್ಷ ದೊಡ್ಡವನಾದ, ಈ ಹಿಂದೆ ತಮ್ಮ ಮಾವನಾದ ಜೆಫ್ ಅವರನ್ನ ಮದುವೆ ಮಾಡಿಕೊಂಡಿದ್ದಾಳೆ.
ಸದ್ಯ ಎರಿಕಾ ತನ್ನ ಮಾಜಿ ಗಂಡನ ಚಿಕ್ಕಮ್ಮಳಾಗಿ ಅದೇ ಮನೆಯಲ್ಲಿ ಇದ್ದಾಳೆ. ಈಗ ಮೂವರು ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ.