BIGGBOSS 8 : ಬಿಗ್ ಬಾಸ್ ಮನೆಗೆ ಕಮ್ ಬ್ಯಾಕ್ ಮಾಡ್ತಾರಾ ದಿವ್ಯಾ ಉರುಡುಗ..?
ಆರೋಗ್ಯ ಸಮಸ್ಯೆಯಿಂದಾಗಿ ಬಿಗ್ ಬಾಸ್ ಮನೆಯಿಂದ ದಿವ್ಯ ಹೊರನಡೆದಿರೋದು ಪ್ರೇಕ್ಷಕರು ಸದಸ್ಯರನ್ನ ದಂಗಾಗಿಸಿದೆ.. ಅದ್ರಲ್ಲೂ ಪ್ರಣಯ ಪಕ್ಷಿಗಳಂತೆ ಜೊತೆಯಲ್ಲೇ ಇರುತ್ತಿದ್ದ ಜೋಡಿ ದೂರವಾಗಿದ್ದು, ಅರವಿಂದ್ ಭಾವುಕರಾಗಿ ಕಣ್ಣಂಈರು ಇಟ್ಟಿದ್ಧಾರೆ.
ದಿವ್ಯಾ ಉರುಡುಗ ಅಭಿಮಾನಿಗಳು ಸಹ ಬೇಸರಗೊಂಡಿದ್ದಾರೆ. ಈ ನಡುವೆ ಬಿಗ್ ಬಾಸ್ ಮನೆಗೆ ದಿವ್ಯಾ ವಾಪಸ್ ಬರಬಹುದಾ ಎಂಬ ಪ್ರಶ್ನೆಗಳು ಕಾಡುತ್ತಿದೆ. ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆಸುತ್ತಿದ್ದಾರೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿವ್ಯಾ 67ನೇ ದಿನ ಮನೆಯನ್ನು ತೊರೆದಿದ್ದರು. ತೊರೆದ ಬಳಿಕ ಬಟ್ಟೆಗಳನ್ನು ಪ್ಯಾಕ್ ಮಾಡಿ ಕಳುಹಿಸಿದ್ದರಿಂದ ಪೂರ್ಣವಾಗಿ ಮನೆಯನ್ನು ಬಿಟ್ಟುಹೋಗಿದ್ದಾರೆ ಎನ್ನಲಾಗುತ್ತಿತ್ತು.
ಆದರೆ ಅವರು ಈಗ ಸೀಕ್ರೇಟ್ ರೂಮಿನಲ್ಲಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ದಿವ್ಯಾ ಯೂರಿನರಿ ಟ್ರ್ಯಾಕ್ ಇನ್‍ಫೆಕ್ಷನ್‍ನಿಂದ ಬಳಲಿದ್ದ ಕಾರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಮಸ್ಯೆ ಬಹಳ ಗಂಭೀರ ಅಲ್ಲದ ಕಾರಣ ಕೆಲ ದಿನಗಳಲ್ಲಿ ವಾಸಿಯಾಗಬಹುದು.
ಹೀಗಾಗಿ ಸೀಕ್ರೇಟ್ ರೂಮ್ ಹೆಸರಿನಲ್ಲಿ ದಿವ್ಯಾ ಕ್ವಾರಂಟೈನ್ ಆಗಿ ಸಂಪೂರ್ಣ ಆರೋಗ್ಯ ಸುಧಾರಿಸಿದ ಮೇಲೆ ಮತ್ತೆ ಅವರನ್ನು ಮನೆಗೆ ಕಳುಹಿಸಬಹುದು ಎಂಬ ಮಾತು ವ್ಯಕ್ತವಾಗುತ್ತಿದೆ.








