ಈ ಇಬ್ಬರು ಬಾಲಿವುಡ್ ನಟರಲ್ಲಿ ಯಾರಾದರೂ ದೇಶದ ಪ್ರಧಾನಿ ಆಗಬೇಕೆಂದ ರಾಖಿ ಸಾವಂತ್..!
ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರೋದಕ್ಕೆ ಕಾರಣಗಳನ್ನ ಹುಡುಕೋದೆ ಬೇಡ.. ಅವರು ಏನೇ ಮಾತನಾಡಿದ್ರು ಅದು ಸೋಷಿಯಲ್ ಮೀಡಿಯಾದಲ್ಲಿ ಆಟೋಮೇಟಿಕ್ ಆಗಿ ಸುದ್ದಿಯಲ್ಲಿಯೇ ಇರುತ್ತೆ..
ಒಮ್ಮೊಮ್ಮೆ ಕಾಂಟ್ರವರ್ಸಿ , ಒಮ್ಮೊಮ್ಮೆ ನೌಟಂಕಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ರಾಖಿ ಈ ಬಾರಿ ಎಕ್ಸ್ಟ್ರೀಮ್ ಲೆವೆಲ್ ನಲ್ಲಿಯೇ ಮಾತನಾಡಿದ್ಧಾರೆ. ಅವರ ಪ್ರಕಾರ ಇಬ್ಬರು ಬಾಲಿವುಡ್ ನ ಸ್ಟಾರ್ ಗಳು ಮುಂದೊಂದು ದಿನ ದೇಶದ ಪ್ರಧಾನಮಂತ್ರಿಗಳಾಗಬೇಕಂತೆ.. ಅದ್ರಲ್ಲಿ ಒಬ್ರು ಲಾಕ್ ಡೌನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿ ರಿಯಲ್ ಹೀರೋ ಎನಿಸಿಕೊಂಡಿರುವ ಸೋನು ಸೂದ್ ಆದ್ರೆ … ಮತ್ತೊಬ್ಬರು ಬಾಲಿವುಡ್ ನ ಸುಲ್ತಾನ ಸಲ್ಮಾನ್ ಖಾನ್.. ಹೌದು ಈ ಇಬ್ಬರಲ್ಲಿ ಯಾರಾದರೂ ಒಬ್ಬರು ದೇಶದ ಪ್ರಧಾನಿಯಾದ್ರೆ ಉತ್ತಮ ಎಂದಿದ್ದಾರೆ.
‘ಇವರಿಬ್ಬರು ನಿಜವಾದ ಹೀರೋಗಳು. ಸೋನು ಸೂದ್ ಅಂತೂ ದೇಶದ ಜನರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಗೊತ್ತೇ ಇದೆ. ಹಾಗಾಗಿ ಇವರಿಬ್ಬರನ್ನು ದೇಶದ ಪ್ರಧಾನಿ ಮಾಡಿಬಿಡಿ’ ಎಂದಿದ್ದಾರೆ. ಸೋನು ಸೂದ್, ಸಲ್ಮಾನ್ ಖಾನ್ ಜೊತೆಗೆ ಸೋನು ಸೂದ್ ಹಾಗೂ ಅಮಿತಾಬ್ ಬಚ್ಚನ್ ಹೆಸರನ್ನೂ ಹೇಳಿದ್ದಾರೆ ನಟಿ ರಾಖಿ ಸಾವಂತ್. ಅಕ್ಷಯ್ ಹಾಗೂ ಅಮಿತಾಬ್ ಸಹ ಪ್ರಧಾನಿ ಆಗಲು ಅರ್ಹತೆಯುಳ್ಳ ನಟರು ಎಂದಿದ್ದಾರೆ.
ಒಂದೆಡೆ ರಿಯಲ್ ಹೀರೋಗಳು ಎಂದು ಪ್ರಧಾನಿಗಳಾಗಬೇಕೆಂಬ ಇಂಗಿತ ವ್ಯಕ್ತೊಪಡಿಸಿರುವ ರಾಖಿ ಪರೋಕ್ಷವಾಗಿ ಸರ್ಕಾರವನ್ನ ಟೀಕೆ ಮಾಡಿದ್ದಾರೆ. ಅಷ್ಟೇ ಅಲ್ಲ ಜನರು ಮತಚಲಾಯಿಸುವ ಮುನ್ನ ಯೋಚಿಸಬೇಕು. ಯಾರು ದೇಶದ ಜನರಿಗಾಗಿ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ತಿಳಿದುಕೊಂಡು ಮತಚಲಾಯಿಸಿದ್ದಿದ್ದರೆ ಇಂದಿನ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ. ಮಂತ್ರಿಗಳು ತಮ್ಮ ಸುರಕ್ಷತೆ ನೋಡಿಕೊಂಡು ಕೂತಿದ್ದಾರೆ. ಸುಮನ್ನೆ ಭಾಷಣಗಳ ಮೇಲೆ ಭಾಷಣ ಮಾಡುತ್ತಿದ್ದಾರೆ. ಆದರೆ ನಮಗೆ ನಿಮ್ಮ ಭಾಷಣ ಬೇಕಿಲ್ಲ. ನಮಗೆ ವ್ಯಾಕ್ಸಿನ್, ಬೆಡ್, ಆಮ್ಲಜನಕ ಬೇಕು ಎಂದು ಕೇಳಿದ್ದಾರೆ. ಇದೇ ವೇಳೆ ಕೋವಿಡ್ 3ನೇ ಅಲೆಯ ಬಗ್ಗೆ ಮಾತನಾಡಿರುವ ರಾಖಿ ಸಾವಂತ್, ‘ಮೂರನೇ ಅಲೆಯಿಂದ ಮಕ್ಕಳಿಗೆ ಸಮಸ್ಯೆ ಆಗುತ್ತದೆ ಎನ್ನಲಾಗುತ್ತಿದೆ. ಮಕ್ಕಳ ಪೋಷಕರ ಕಥೆಯೇನು. ನನ್ನ ಹೃದಯ ಅಳುತ್ತಿದೆ’ ಎಂದಿದ್ದಾರೆ.









