“ಸರ್ ಐ ಕಾಂಟ್ ಲೀವ್ ವಿಥೌಟ್ ಸ್ಮೋಕಿಂಗ್ ಪ್ಲೀಸ್ ಲೀವ್ ಮಿ”
ಬೆಂಗಳೂರು : ಕೊರೊನಾ ಕಂಟ್ರೋಲ್ ಗೆ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ರಾಜ್ಯದೆಲ್ಲೆಡೆ ಜನರು ರಸ್ತೆಗಿಳಿಯದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ. ಆದರೂ ಕೂಡ ಕೆಲವರು ಕುಂಠು ನೆಪ ಹೇಳಿಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದಾರೆ.
ಅಂತವರ ವಾಹನವನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ. ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಕೆಲಸದಲ್ಲಿ ಪೊಲೀಸರಿದ್ದಾರೆ.
ಈ ಮಧ್ಯೆ ಬೆಂಗಳೂರಿನ ಚಿಕ್ಕಬೊಮ್ಮಸಂದ್ರದ ವ್ಯಕ್ತಿವೋರ್ವ ಸಿಗರೇಟ್ ಗಾಗಿ ಕೆ.ಆರ್.ಮಾರ್ಕೇಟ್ ಗೆ ಬಂದಿದ್ದು, ಆತನ ಬೈಕ್ ಸೀಜ್ ಮಾಡಲಾಗಿದೆ.
ಚಿಕ್ಕಬೊಮ್ಮಸಂದ್ರದ ಫರ್ದಾಮ್ ಎಂಬಾತ ಸಿಗರೇಟ್ ಆಗಿ ಕೆ.ಆರ್.ಮಾರ್ಕೇಟ್ ಗೆ ಬಂದು ವಾಪಸ್ ಹೋಗುವಾಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಆ ವೇಳೆ ಫರ್ದಾಮ್ ಸರ್ ಐಯಾಮ್ ಎ ಚೈನ್ ಸ್ಮೋಕರ್. ಐ ಕಾಂಟ್ ಲೀವ್ ವಿಥೌಟ್ ಸ್ಮೋಕಿಂಗ್. ಪ್ಲೀಸ್ ಲೀವ್ ಮಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಪಿತ್ತನೆತ್ತಿಗೇರಿಸಿಕೊಂಡ ಪೊಲೀಸರು ಆತನ ಬೈಕ್ ಸೀಜ್ ಮಾಡಿ ನಡೆದುಕೊಂಡೇ ಮನೆಗೋಗು ಎಂದು ಕಳುಹಿಸಿಕೊಟ್ಟಿದ್ದಾರೆ.









