ADVERTISEMENT
Tuesday, November 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಚೀನಾದ ಅಸಲಿ ಮುಖ ಬಯಲು ಮಾಡಿದ್ದ ಬ್ಲಾಗರ್‌ ಜೈಲು ಶಿಕ್ಷೆ..!

Namratha Rao by Namratha Rao
June 2, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

Related posts

ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಹಕ್ಕು ಯಾರಿಗೂ ಇಲ್ಲ: ರಾಹುಲ್ ಪರ ನಿಂತ ಇಟಲಿ ನಾಯಕನ ಬೆವರಿಳಿಸಿದ ಇಟಲಿ ನಾಯಕಿ

ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಹಕ್ಕು ಯಾರಿಗೂ ಇಲ್ಲ: ರಾಹುಲ್ ಪರ ನಿಂತ ಇಟಲಿ ನಾಯಕನ ಬೆವರಿಳಿಸಿದ ಇಟಲಿ ನಾಯಕಿ

November 17, 2026
ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ವೇತನ ಹಿಂಬಾಕಿ ಪಾವತಿಗೆ ₹280 ಕೋಟಿ ಬಿಡುಗಡೆ

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ವೇತನ ಹಿಂಬಾಕಿ ಪಾವತಿಗೆ ₹280 ಕೋಟಿ ಬಿಡುಗಡೆ

November 17, 2026

ಚೀನಾದ ಅಸಲಿ ಮುಖ ಬಯಲು ಮಾಡಿದ್ದ ಬ್ಲಾಗರ್‌ ಜೈಲು ಶಿಕ್ಷೆ..!

ಚೀನಾದಲ್ಲಿ ಅಲ್ಲಿನ ಸರ್ಕಾರದ ಕರ್ಮಕಾಂಡವನ್ನ ಬಿಚ್ಚಿಡುವ ಕೆಲಸ ಅಂದ್ರೆ ನೇರವಾಗಿ ಹೇಳೋದಾದ್ರೆ ನಿಜ ಹೇಳುವವರಿಗೆ ಯಾರಿಗೂ ಉಳಿಗಾಲ ಇಲ್ಲ ಎನ್ನುವುದು ಪದೇ ಪದೇ ಸಾಬೀತಾಗಿದೆ.. ಉತ್ತರ ಕೊರಿಯಾಗಿಂತಲೂ ಚೀನಾ ಈ ವಿಚಾರದಲ್ಲಿ ಭಿನ್ನವಾಗಿಲ್ಲ. ಕೋವಿಡ್ ಸಂದರ್ಭದಲ್ಲಿರಬಹುದು ,  ಗಾಲ್ವನ್‌ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷವಿರಬಹುದು ಸರ್ಕಾರದ ಸುಳ್ಳು ಬಿಚ್ಚಿಟ್ಟವರಿಗೆ ಉಳಿಗಾಲವಿಲ್ಲ.. ಈ ಹಿಂದೆ ಅನೇಕ ವರದಿಗಾರರು  ನಾಪತ್ತೆಯಾಗಿದ್ದು, ಇದರ ಹಿಂದೆ ಅಲ್ಲಿನ  ಸರ್ಕಾರದ ಕಲೈವಾಡವಿರೋದಾಗಿ ಆರೋಪಗಳು ಸಹ ಕೇಳಿಬಂದಿದ್ದವು.

ಇದೀಗ ಕಳೆದ ವರ್ಷ ಗಾಲ್ವನ್‌ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಭವಿಸಿದ ಸಂಘರ್ಷದಲ್ಲಿ, ಸತ್ತವರ ಸಂಖ್ಯೆ ಚೀನಾದ ಅಧಿಕೃತ ಸಂಖ್ಯೆಗಿಂತ ಹೆಚ್ಚಿದೆ ಎಂದು ಪೋಸ್ಟ್‌ ಮಾಡಿದ್ದ ಚೀನಾದ ಖ್ಯಾತ ಬ್ಲಾಗರ್‌ ಕ್ಯೂ ಜಿಮಿಂಗ್‌ ಅವರಿಗೆ 8 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.

ನ್ಯಾನ್‌ ಜಿಂಗ್‌ ನಗರದ ಕೋರ್ಟ್‌ ಮಂಗಳವಾರ ಜಿಮಿಂಗ್‌ ಅವರಿಗೆ ಹುತಾತ್ಮ ಸೈನಿಕರಿಗೆ ಅವಮಾನ ಮಾಡಿದ ಆಪಾದನೆಯಡಿ ಮಂಗಳವಾರ ಶಿಕ್ಷೆ ನೀಡಿದೆ. ಚೀನಾ ನೂತನ ಅಪರಾಧ ಕಾನೂನು ತಂದಿದ್ದು, ಸೈನಿಕರಿಗೆ ಮತ್ತು ಸಾಹಸಿಗಳಿಗೆ ಅವಮಾನಿಸುವಂತಹ ಹೇಳಿಕೆ ಅಥವಾ ಬರಹಗಳನ್ನು ಪ್ರಕಟಿಸುವುದನ್ನು ನಿಷೇಧಿಸಲಾಗಿದೆ.

ಹೊಸ ಕಾನೂನು ಜಾರಿಯಾದ ಬಳಿಕ ಸೈನಿಕರಿಗೆ ಅವಮಾನ ಮಾಡಲಾಗಿದೆ ಎಂಬ ಕಾರಣಕ್ಕೆ ಜೈಲು ಸೇರಿದ ಮೊದಲಿಗ ಎಂದು ಜಿಮಿಂಗ್‌ ಗುರುತಿಸಿಕೊಂಡಿದ್ದಾರೆ. ಟ್ವಿಟರ್‌ನಂತಹ ಸಾಮಾಜಿಕ ತಾಣ ವೆಬೊನಲ್ಲಿ 25 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ಜಿಮಿಂಗ್‌, ಕಳೆದ ಜೂನ್‌ ತಿಂಗಳಲ್ಲಿ ಸ್ಕಿರ್ಮಿಶ್‌ನಲ್ಲಿ ಭಾರತೀಯ ಸೈನಿಕರೊಂದಿಗೆ ನಡೆದ ಕಾಳಗದಲ್ಲಿ ಚೀನಾದ ಅಧಿಕೃತ ಮಾಹಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಚೀನಿ ಸೈನಿಕರು ಸತ್ತಿದ್ದಾರೆ ಎಂದು ಪೋಸ್ಟ್‌ ಮಾಡಿದ್ದರು.

ಸಂಘರ್ಷದಲ್ಲಿ ಬದುಕುಳಿದ ಚೀನಾ ಅಧಿಕಾರಿಯ ಬಗ್ಗೆ, ‘ಅವರು ಉನ್ನತ ಹುದ್ದೆಯಲ್ಲಿದ್ದ ಕಾರಣಕ್ಕೆ ಬದುಕುಳಿದಿದ್ದಾರೆ’ಎಂದು ಜಿಮಿಂಗ್‌ ಕಮೆಂಟ್‌ ಮಾಡಿದ್ದರು. ಹೀಗಾಗಿ ಜಿಮಿಂಗ್‌ ಅವರನ್ನು ಕಳೆದ ಫೆಬ್ರವರಿಯಲ್ಲಿ ಬಂಧಿಸಿ, ಅವರ ಸಾಮಾಜಿಕ ಪುಟ ಕ್ರಯಾನ್‌ ಬಾಲ್‌ಗೆ ನಿಷೇದ ಹೇರಿದ್ದರು.

ಕೋರ್ಟ್‌ನಲ್ಲಿ ಚೀನಾದ ನೂತನ ಕಾನೂನಿಗೆ ವಿರುದ್ಧವಾಗಿ ಮಾಡಲಾದ ಪೋಸ್ಟ್‌ ತನ್ನದೆಂದು ಜಿಮಿಂಗ್‌ ಒಪ್ಪಿಕೊಂಡಿದ್ದರುಘರ್ಷಣೆ ನಡೆದ ಒಂದು ತಿಂಗಳ ಬಳಿಕ ಸಂಘರ್ಷದಲ್ಲಿ ನಾಲ್ವರು ಚೀನಿ ಸೈನಿಕರು ಹುತಾತ್ಮರಾಗಿರುವುದಾಗಿ ಚೀನಾ ಸರ್ಕಾರ ಹೇಳಿಕೊಂಡಿತ್ತು. ಅವರನ್ನು ಗಡಿ ಸಂರಕ್ಷಿಸಿದ ಹೀರೋಗಳು ಎಂದು ಕರೆದಿತ್ತು.

Tags: armyblogerchainamilitarysocial media
ShareTweetSendShare
Join us on:

Related Posts

ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಹಕ್ಕು ಯಾರಿಗೂ ಇಲ್ಲ: ರಾಹುಲ್ ಪರ ನಿಂತ ಇಟಲಿ ನಾಯಕನ ಬೆವರಿಳಿಸಿದ ಇಟಲಿ ನಾಯಕಿ

ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಹಕ್ಕು ಯಾರಿಗೂ ಇಲ್ಲ: ರಾಹುಲ್ ಪರ ನಿಂತ ಇಟಲಿ ನಾಯಕನ ಬೆವರಿಳಿಸಿದ ಇಟಲಿ ನಾಯಕಿ

by Shwetha
November 17, 2026
0

ತೆಲಂಗಾಣದ ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಭಾರತ್ ಶೃಂಗಸಭೆಯಲ್ಲಿ ವಿದೇಶಿ ರಾಜಕಾರಣಿಯೊಬ್ಬರು ಭಾರತದ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿರುವ ಪ್ರಕರಣವು ಇದೀಗ ರಾಷ್ಟ್ರೀಯ...

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ವೇತನ ಹಿಂಬಾಕಿ ಪಾವತಿಗೆ ₹280 ಕೋಟಿ ಬಿಡುಗಡೆ

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ವೇತನ ಹಿಂಬಾಕಿ ಪಾವತಿಗೆ ₹280 ಕೋಟಿ ಬಿಡುಗಡೆ

by Shwetha
November 17, 2026
0

ರಾಜ್ಯದ ಸಾರಿಗೆ ನಿಗಮಗಳ ನೌಕರರಿಗೆ ಬಾಕಿ ಇರುವ ವೇತನ ಪಾವತಿ ಪ್ರಕ್ರಿಯೆಗೆ ಸರ್ಕಾರ ಮತ್ತೊಂದು ಕಂತಿನ ಅನುದಾನ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ವಿಶೇಷ ಅನುದಾನದಡಿ ನಾಲ್ಕು ಸಾರಿಗೆ...

ಭದ್ರತಾ ಪಡೆಗಳ ಕಾರ್ಯಾಚರಣೆ: ಕುಲ್ಗಾಂ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ

ಭದ್ರತಾ ಪಡೆಗಳ ಕಾರ್ಯಾಚರಣೆ: ಕುಲ್ಗಾಂ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ

by Shwetha
November 17, 2026
0

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಇಬ್ಬರು ಉಗ್ರರು ಹತರಾಗಿದ್ದಾರೆ. ಹತರಾದವರಲ್ಲಿ ಸಂಘಟನೆಯ ಸ್ಥಳೀಯ ಕಮಾಂಡರ್ ಮೊಹಮ್ಮದ್...

ಉತ್ತರ ಪ್ರದೇಶದಲ್ಲಿ ರಾಜಕೀಯ ಪ್ರವಾಸಿಗರ ಹಾವಳಿ: ಬೇರೆಯವರ ಮೈಕ್‌ಗೆ ಒವೈಸಿ ಲೌಡ್‌ಸ್ಪೀಕರ್- ಒವೈಸಿ ಬಿಜೆಪಿಯ ಏಜೆಂಟ್ ಎಂದ ಅಖಿಲೇಶ್ ಯಾದವ್

ಉತ್ತರ ಪ್ರದೇಶದಲ್ಲಿ ರಾಜಕೀಯ ಪ್ರವಾಸಿಗರ ಹಾವಳಿ: ಬೇರೆಯವರ ಮೈಕ್‌ಗೆ ಒವೈಸಿ ಲೌಡ್‌ಸ್ಪೀಕರ್- ಒವೈಸಿ ಬಿಜೆಪಿಯ ಏಜೆಂಟ್ ಎಂದ ಅಖಿಲೇಶ್ ಯಾದವ್

by Shwetha
November 17, 2026
0

ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದಂತೆಯೇ ರಾಜಕೀಯ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಅವರನ್ನು ಬಿಜೆಪಿಯ ಏಜೆಂಟ್ ಎಂದು...

ನಿಖಿಲ್ ಕುಮಾರಸ್ವಾಮಿ ದೇಗುಲದ ಆಚೆ ನಿಂತರೆ ಅಷ್ಟು ದೊಡ್ಡ ಸುದ್ದಿನಾ: ದಿನನಿತ್ಯ ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆಯಾಗುತ್ತೆ, ಆಗೆಲ್ಲಾ ಯಾರೂ ಮಾತಾಡಲ್ಲ- ನಿಖಿಲ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

ನಿಖಿಲ್ ಕುಮಾರಸ್ವಾಮಿ ದೇಗುಲದ ಆಚೆ ನಿಂತರೆ ಅಷ್ಟು ದೊಡ್ಡ ಸುದ್ದಿನಾ: ದಿನನಿತ್ಯ ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆಯಾಗುತ್ತೆ, ಆಗೆಲ್ಲಾ ಯಾರೂ ಮಾತಾಡಲ್ಲ- ನಿಖಿಲ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

by Shwetha
November 17, 2026
0

ರಾಮನಗರದಲ್ಲಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಲಾಗಿದೆ ಎಂಬ ವಿಚಾರವು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram