ಚೀನಾದ ಅಸಲಿ ಮುಖ ಬಯಲು ಮಾಡಿದ್ದ ಬ್ಲಾಗರ್ ಜೈಲು ಶಿಕ್ಷೆ..!
ಚೀನಾದಲ್ಲಿ ಅಲ್ಲಿನ ಸರ್ಕಾರದ ಕರ್ಮಕಾಂಡವನ್ನ ಬಿಚ್ಚಿಡುವ ಕೆಲಸ ಅಂದ್ರೆ ನೇರವಾಗಿ ಹೇಳೋದಾದ್ರೆ ನಿಜ ಹೇಳುವವರಿಗೆ ಯಾರಿಗೂ ಉಳಿಗಾಲ ಇಲ್ಲ ಎನ್ನುವುದು ಪದೇ ಪದೇ ಸಾಬೀತಾಗಿದೆ.. ಉತ್ತರ ಕೊರಿಯಾಗಿಂತಲೂ ಚೀನಾ ಈ ವಿಚಾರದಲ್ಲಿ ಭಿನ್ನವಾಗಿಲ್ಲ. ಕೋವಿಡ್ ಸಂದರ್ಭದಲ್ಲಿರಬಹುದು , ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷವಿರಬಹುದು ಸರ್ಕಾರದ ಸುಳ್ಳು ಬಿಚ್ಚಿಟ್ಟವರಿಗೆ ಉಳಿಗಾಲವಿಲ್ಲ.. ಈ ಹಿಂದೆ ಅನೇಕ ವರದಿಗಾರರು ನಾಪತ್ತೆಯಾಗಿದ್ದು, ಇದರ ಹಿಂದೆ ಅಲ್ಲಿನ ಸರ್ಕಾರದ ಕಲೈವಾಡವಿರೋದಾಗಿ ಆರೋಪಗಳು ಸಹ ಕೇಳಿಬಂದಿದ್ದವು.
ಇದೀಗ ಕಳೆದ ವರ್ಷ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಭವಿಸಿದ ಸಂಘರ್ಷದಲ್ಲಿ, ಸತ್ತವರ ಸಂಖ್ಯೆ ಚೀನಾದ ಅಧಿಕೃತ ಸಂಖ್ಯೆಗಿಂತ ಹೆಚ್ಚಿದೆ ಎಂದು ಪೋಸ್ಟ್ ಮಾಡಿದ್ದ ಚೀನಾದ ಖ್ಯಾತ ಬ್ಲಾಗರ್ ಕ್ಯೂ ಜಿಮಿಂಗ್ ಅವರಿಗೆ 8 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ನ್ಯಾನ್ ಜಿಂಗ್ ನಗರದ ಕೋರ್ಟ್ ಮಂಗಳವಾರ ಜಿಮಿಂಗ್ ಅವರಿಗೆ ಹುತಾತ್ಮ ಸೈನಿಕರಿಗೆ ಅವಮಾನ ಮಾಡಿದ ಆಪಾದನೆಯಡಿ ಮಂಗಳವಾರ ಶಿಕ್ಷೆ ನೀಡಿದೆ. ಚೀನಾ ನೂತನ ಅಪರಾಧ ಕಾನೂನು ತಂದಿದ್ದು, ಸೈನಿಕರಿಗೆ ಮತ್ತು ಸಾಹಸಿಗಳಿಗೆ ಅವಮಾನಿಸುವಂತಹ ಹೇಳಿಕೆ ಅಥವಾ ಬರಹಗಳನ್ನು ಪ್ರಕಟಿಸುವುದನ್ನು ನಿಷೇಧಿಸಲಾಗಿದೆ.
ಹೊಸ ಕಾನೂನು ಜಾರಿಯಾದ ಬಳಿಕ ಸೈನಿಕರಿಗೆ ಅವಮಾನ ಮಾಡಲಾಗಿದೆ ಎಂಬ ಕಾರಣಕ್ಕೆ ಜೈಲು ಸೇರಿದ ಮೊದಲಿಗ ಎಂದು ಜಿಮಿಂಗ್ ಗುರುತಿಸಿಕೊಂಡಿದ್ದಾರೆ. ಟ್ವಿಟರ್‌ನಂತಹ ಸಾಮಾಜಿಕ ತಾಣ ವೆಬೊನಲ್ಲಿ 25 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ಜಿಮಿಂಗ್, ಕಳೆದ ಜೂನ್ ತಿಂಗಳಲ್ಲಿ ಸ್ಕಿರ್ಮಿಶ್‌ನಲ್ಲಿ ಭಾರತೀಯ ಸೈನಿಕರೊಂದಿಗೆ ನಡೆದ ಕಾಳಗದಲ್ಲಿ ಚೀನಾದ ಅಧಿಕೃತ ಮಾಹಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಚೀನಿ ಸೈನಿಕರು ಸತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದರು.
ಸಂಘರ್ಷದಲ್ಲಿ ಬದುಕುಳಿದ ಚೀನಾ ಅಧಿಕಾರಿಯ ಬಗ್ಗೆ, ‘ಅವರು ಉನ್ನತ ಹುದ್ದೆಯಲ್ಲಿದ್ದ ಕಾರಣಕ್ಕೆ ಬದುಕುಳಿದಿದ್ದಾರೆ’ಎಂದು ಜಿಮಿಂಗ್ ಕಮೆಂಟ್ ಮಾಡಿದ್ದರು. ಹೀಗಾಗಿ ಜಿಮಿಂಗ್ ಅವರನ್ನು ಕಳೆದ ಫೆಬ್ರವರಿಯಲ್ಲಿ ಬಂಧಿಸಿ, ಅವರ ಸಾಮಾಜಿಕ ಪುಟ ಕ್ರಯಾನ್ ಬಾಲ್‌ಗೆ ನಿಷೇದ ಹೇರಿದ್ದರು.
ಕೋರ್ಟ್‌ನಲ್ಲಿ ಚೀನಾದ ನೂತನ ಕಾನೂನಿಗೆ ವಿರುದ್ಧವಾಗಿ ಮಾಡಲಾದ ಪೋಸ್ಟ್ ತನ್ನದೆಂದು ಜಿಮಿಂಗ್ ಒಪ್ಪಿಕೊಂಡಿದ್ದರುಘರ್ಷಣೆ ನಡೆದ ಒಂದು ತಿಂಗಳ ಬಳಿಕ ಸಂಘರ್ಷದಲ್ಲಿ ನಾಲ್ವರು ಚೀನಿ ಸೈನಿಕರು ಹುತಾತ್ಮರಾಗಿರುವುದಾಗಿ ಚೀನಾ ಸರ್ಕಾರ ಹೇಳಿಕೊಂಡಿತ್ತು. ಅವರನ್ನು ಗಡಿ ಸಂರಕ್ಷಿಸಿದ ಹೀರೋಗಳು ಎಂದು ಕರೆದಿತ್ತು.