12 ಅಂತಸ್ತು ಕಟ್ಟಡ ಕುಸಿತ : 100ಕ್ಕೂ ಹೆಚ್ಚು ಸಾವು ಸಾಧ್ಯತೆ , 12 ಜನರ ರಕ್ಷಣೆ
ಮಿಯಾಮಿ : 12 ಅಂತಸ್ತಿನ ಕಟ್ಟಡವೊಂದು ಬಾಹಶಃ ಕುಸಿದಿದ್ದು, ನೂರಾರು ಮಂದಿ ಅವಶೇಷಗಳಡಿ ಸಿಲುಕಿರುವ ಘಟನೆ ಮಿಯಾಮಿ ಹೊರಭಾಗಲ್ಲಿ ಸಂಭವಿಸಿದೆ. ಇಲ್ಲಿಯವರೆಗೆ ಒಂದು ಶವ ಸಿಕ್ಕಿದ್ದು, ಸುಮಾರು 12 ಜನರನ್ನು ರಕ್ಷಿಸಲಾಗಿದೆ. ಅವಶೇಷಗಳಡಿ 100ಕ್ಕೂ ಹೆಚ್ಚು ಜನ ಸಿಲುಕಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಬೃಹದಾಕಾರದಲ್ಲಿ ನಿರ್ಮಾಣವಾಗಿದ್ದ ಡಾಲ್ ಹೌಸ್ ಬೆಂಚ್ ಫ್ರಂಟ್ ಕಾಂಡೊ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದೆ. 12ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಸ್ಥಳೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ವಸತಿ ಸಮುಚ್ಛಯ ಆಗಿರುವುದರಿಂದ ನೂರಾರು ಜನರು ಇನ್ನೂ ಪತ್ತೆಯಾಗಿಲ್ಲ. ಅವರಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 10ರಿಂದ 12 ರಕ್ಷಣಾ ತಂಡಗಳು ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅತ್ಯಾಧುನಿಕ ಯಂತ್ರೋಪಕರಣಗಳ ಜತೆಗೆ, ಬದುಕುಳಿದಿರುವವ ಮತ್ತು ಮೃತರ ಪತ್ತೆಗೆ ಶ್ವಾನಗಳನ್ನೂ ಬಳಸಲಾಗಿದೆ. ಆದ್ರೆ ಮೂಲಗಳ ಪ್ರಕಾರ ನೂರಕ್ಕೂ ಹೆಚ್ಚು ಮಂದಿ ಕಟ್ಟಗಳ ಅವಶೇಷಗಳಿಡಿ ಸಿಲುಕಿರುವವರು ಮೃಪಟ್ಟಿರಬಹುದಾದ ಅನುಮಾನಗಳು ವ್ಯಕ್ತವಾಗಿವೆ…








