ರಾಜ್ಯದಲ್ಲಿ ಆನಂದಯ್ಯ ಔಷಧಿ ಹಂಚಿಕೆ
ಬಳ್ಳಾರಿ : ಕೊರೊನಾ ಔಷಧಿ ಎಂದು ಆಂಧ್ರದಲ್ಲಿ ಭಾರಿ ಸಂಚಲನ ಸೃಷ್ಠಿ ಮಾಡಿದ್ದ ಆನಂದಯ್ಯ ಆಯುರ್ವೇದ ಔಷಧಿಯನ್ನ ರಾಜ್ಯದಲ್ಲಿ ಹಂಚಿಕೆ ಮಾಡಲಾಗುತ್ತಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಆನಂದಯ್ಯನ ಔಷಧಿ ವಿತರಣೆ ಆಗುತ್ತಿದೆ.
ಹಂಪಿಯ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯವರಿಂದ ಔಷಧಿ ವಿತರಣೆ ಮಾಡಲಾಗುತ್ತಿದೆ.
ಸುಮಾರು 500 ಕುಟುಂಬಗಳಿಗೆ ಉಚಿತವಾಗಿ ಔಷದಿ ವಿತರಣೆ ಮಾಡಲಾಗಿದೆ.
ಆನಂದಯ್ಯನವರ ಔಷಧಿಗೆ ಆಂಧ್ರ ಪ್ರದೇಶದ ಆಯುಷ್ ಇಲಾಖೆ ಅನುಮತಿ ನೀಡಿದೆ.
ಹೀಗಾಗಿ ಕಮಲಾಪುರದ ಶ್ರೀ ನಗರೇಶ್ವರ ಆಂಜನೇಯ ದೇವಾಲಯದಲ್ಲಿ ಶ್ರೀಗಳು ವಿತರಣೆ ಮಾಡಿದ್ದಾರೆ.









