ಮದುವೆಗೆ ಪೋಷಕರ ವಿರೋಧ – ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು
ಗುಜರಾತ್ : ಪ್ರೀತಿಸಿದ ಇಬ್ಬರ ಮದುವೆಗೆ ಪೋಷಕರು ನಿರಾಕರಿಸಿದ ಕಾರಣಕ್ಕೆ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ನೆರೆಮನೆಯವರಾಗಿದ್ದ ಇಬ್ಬರೂ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಒಂದೇ ಜಾತಿಗೆ ಸೇರಿದವರೇ ಆಗಿದ್ದರೂ.. ಆದ್ರೂ ಸಹ ಇವರಿಬ್ಬರ ಪ್ರೀತಿಗೆ ಎರಡೂ ಮನೆವರು ವಿರೋಧ ವ್ಯಕ್ತಪಡಿಸಿ, ಮದುವೆಗೆ ನಿರಾಕರಿಸಿದ್ದರು..
ಇತ್ತ ಯುವತಿಗೆ ಆಕೆಯ ಪೋಷಕರು ಮತ್ತೊಬ್ಬನ ಜೊತೆಗೆ ಮದುವೆ ನಿಶ್ಚಯಿಸಿದ್ದರು.. ಇದ್ರಿಂದ ಮನನೊಂದಿರುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸ್ಥಳೀಯ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.