ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಖಡ್ಗ ಅರ್ಪಿಸಿದ ದಂಪತಿ
ಆಂಧ್ರ ಪ್ರದೇಶ : ತಿರುಪತಿ ವೆಂಕಟೇಶ್ವರ ಸ್ವಾಮಿಯ ಭಕ್ತ ದಂಪತಿಯೊಬ್ಬರು 4 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಖಡ್ಗವನ್ನು ದೇವರಿಗೆ ಅರ್ಪಿಸಿದ್ದಾರೆ.
ಹೈದರಾಬಾದ್ ಮೂಲದ ಎಂ ಶ್ರೀನಿವಾಸ ಪ್ರಸಾದ್ ಮತ್ತು ಅವರ ಪತ್ನಿ 6.5 ಕೆ.ಜಿ ತೂಕದ ಚಿನ್ನದ ಖಡ್ಗ ವನ್ನು ದೇವಾಲಯದ ಮಂಡಳಿಗೆ ಹಸ್ತಾಂತರಿಸಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳಿಗೆ ಖಡ್ಗ ಹಸ್ತಾಂತರಿಸುವುದಕ್ಕೂ ಮೊದಲು ಖಡ್ಗವನ್ನು ತಿರುಮಲದ ಕಲೆಕ್ಟಿವ್ ಅತಿಥಿ ಗೃಹದಲ್ಲಿ ಭಾನುವಾರ ಮಾಧ್ಯಮಗಳ ಮುಂದೆ ಪ್ರದರ್ಶಿಸಲಾಯಿತು.
ಈ ಖಡ್ಗವನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ತಯಾರಿಸಲಾಗಿದೆ. ಸುಮಾರು ಆರೂವರೆ ಕೆಜಿ ತೂಕವಿರುವ ಖಡ್ಗ ತಯಾರಿಸುವ ವೇಳೆ ಅದರ ಬೆಲೆ 1.8 ಕೋಟಿ ರೂಪಾಯಿಯಷ್ಟಿತ್ತಂತೆ ಆದರೆ ಇದೀಗ ಅದರ ಬೆಲೆ 4 ಕೋಟಿ ರೂಪಾಯಿಯಾಗಿದೆ ಎಂದು ತಿಳಿದುಬಂದಿದೆ.









