BIGGBOSS 8 : ಮತ್ತೆ ವೈಲೆಂಟ್ ಆದ ಸಂಬರಗಿ – ಕಳಪೆ ಎಂದವರ ವಿರುದ್ಧ ಗರಂ
ಪ್ರಶಾಂತ್ ಸಂಬರಗಿ ಮನೆಯಲ್ಲಿ ಆಗಾಗ ಪ್ರತಿ ಸ್ಪರ್ಧಿಗಳ ಜೊತೆಗೆ ಕಿತ್ತಾಡಿಕೊಳ್ಳೋದು , ಗಲಾಟೆ ಮಾಡೋದು ಹೊಸ ವಿಚಾರವೇನಲ್ಲ.. ಆದ್ರೆ ಒಂದೆರೆಡು ದಿನಗಳಿಂದ ಸಿಕ್ಕಾಪಟ್ಟೆ ಸೈಲೆಂಟ್ ಆಗಿದ್ದ ಸಂಬರಗಿ ಇದೀಗ ಮತ್ತೆ ಟ್ರಿಗರ್ ಆಗಿದ್ದಾರೆ.. ತಮಗೆ ಕಳಪೆ ಬೋರ್ಡ್ ಕೊಟ್ಟಿದ್ದನ್ನ ಪ್ರಶ್ನಿಸಿ ಸ್ಪರ್ಧಿಗಳ ನಡೆಯನ್ನ ತೀವ್ರವಾಗಿ ಖಮಡಿಸಿದ್ದಾರೆ ಸಂಬರಗಿ.. ಟಾಸ್ಕ್ ವಿಚಾರವಾಗಿ ಯಾರು ಕಳಪೆ, ಯಾರು ಅತ್ಯುತ್ತಮ ಎಂಬ ಚರ್ಚೆಯನ್ನು ಮನೆಯರೆಲ್ಲ ಮಾಡುತ್ತಿದ್ದರು. ಈ ವೇಳೆ ಪ್ರಶಾಂತ್ ಸಂಬರಗಿ ಅವರಿಗೆ ಮೂವರು ಕಳಪೆ ಹಾಗೂ ಮೂವರು ಅತ್ಯತ್ತಮ ಎಂದು ವೋಟ್ ಹಾಕಿದರು. ಟೈ ಆದ ಪರಿಣಾಮ ಕ್ಯಾಪ್ಟನ್ ತಮ್ಮ ಅಭಿಪ್ರಾಯ ತಿಳಿಸಬೇಕಾಯಿತು. ಈ ವೇಳೆ ದಿವ್ಯಾ ಉರುಡುಗ ಪ್ರಶಾಂತ್ ಸಂಬರಗಿ ಅವರನ್ನು ಕಳಪೆ ಎಂದಿದ್ದಾರೆ. ಹೀಗೆ ಹೇಳುತ್ತಿದ್ದಂತೆ ರೊಚ್ಚಿಗೆದ್ದ ಪ್ರಶಾಂತ್, ಎಲ್ಲರೂ ಪ್ರಯತ್ನಿಸಿದ್ದೇವೆ, ಎಲ್ಲರೂ ಚೆನ್ನಾಗಿ ಆಡಿದ್ದೇವೆ, ಟಾಸ್ಕ್‍ಗಾಗಿ ಗಾಯ ಮಾಡಿಕೊಂಡಿದ್ದೇವೆ. ಹೀಗಿರುವಾಗ ಯಾರೂ ಕಳಪೆ ಅಲ್ಲ, ಈ ಬಾರಿ ಯಾರೂ ಕಳಪೆಯಲ್ಲ ಎಂದು ಬಿಗ್ ಬಾಸ್‍ಗೆ ಹೇಳಬಹುದು ಎಂದು ವಾದ ಮಾಡಿದ್ದಾರೆ.
ಬಳಿಕ ವೈಷ್ಣವಿ ಸಹ ಪ್ರಶಾಂತ್ ಸಂಬರಗಿ ಅವರು ತಾವೂ ಆಡಲಿಲ್ಲ, ಆಡುವವರಿಗೂ ಅವಕಾಶ ನೀಡಲಿಲ್ಲ. ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ ಎನ್ನುತ್ತಾರೆ. ಇದಕ್ಕೆ ಸಿಟ್ಟಿಗೆದ್ದ ಸಂಬರಗಿ, ನಾನು ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ, ಏನೂ ಮಾಡಿಯೇ ಇಲ್ಲ ಎನ್ನುವ ರೀತಿಯಲ್ಲಿ ಹೇಳಬೇಡಿ, ನಾನು ಪ್ರಯತ್ನಪಟ್ಟಿದ್ದೇನೆ ಆದರೆ ನನಗೆ ಆಡಲು ಆಗಿಲ್ಲ. ಅದರ ಹಿಂದಿನ ದಿನ ನನಗೆ ರಟ್ಟೆಯಲ್ಲಿ ನೋವು ಕಾಣಿಸಿಕೊಂಡಿತ್ತು, ಚಿಕಿತ್ಸೆ ಪಡೆದಿದ್ದೇನೆ. ಅಲ್ಲದೆ ಬಹುತೇಕರು ಅವಕಾಶ ಕಳೆದುಕೊಂಡಿದ್ದಾರೆ ಅವರ ಬಗ್ಗೆ ಮಾತನಾಡುವುದಿಲ್ಲ, ಕೇವಲ ನನ್ನ ಬಗ್ಗೆ ಮಾತ್ರ ಮಾತನಾಡುತ್ತೀರಿ ಎಂದು ಗುಡುಗಿದ್ದಾರೆ.
ನಾನು ಒಂದು ಗೇಮ್‍ನಲ್ಲಿ ಆಡದಿರುವುದನ್ನು ಚುಚ್ಚಿ ತೋರಿಸುತ್ತೀರಿ ಎಂದರೆ ನಿಮ್ಮ ಮನಸ್ಥಿತಿ ಹೇಗಿರಬೇಕು. ಆಡಿದ್ದೇನೆ, 10 ಬಾರಿ ಆಚೆ ಬಂದಿದ್ದೇನೆ, ದಿವ್ಯಾ ಸುರೇಶ್ ನನ್ನನ್ನು ಮರಳಿ ಔಟ್ ಎಂದು ಕಳುಹಿಸಿದ್ದಾರೆ. ಎಲ್ಲರೂ ಫಸ್ಟ್ ಕ್ಲಾಸ್ ಆಗಬೇಕೆಂದೇನಿಲ್ಲ. ಅವಕಾಶ ಕಳೆದುಕೊಂಡಿದ್ದೇನೆ ಎಂದು ಹೇಳಬೇಡಿ ಎಂದಿದ್ದಾರೆ. ಜೊತೆಗೆ ದಯವಿಟ್ಟು ಸುಖಾಸುಮ್ಮನೆ ಕಳಪೆ ಎಂದು ಹೇಳಬೇಡಿ, ಯೋಚನೆ ಮಾಡಿ ಹೇಳಿ, ನಿಮ್ಮ ಮನಸ್ಸನ್ನು, ಎದೆಯನ್ನು ಮುಟ್ಟಿಕೊಂಡು ಮಾತನಾಡಿ. ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ನನ್ನನ್ನು ಕಳಪೆ ಎನ್ನುತ್ತಿದ್ದಾರೆ ಎಂದು ಪರೋಕ್ಷವಾಗಿ ವೈಷ್ಣವಿ ವಿರುದ್ಧ ಕಿಡಿಕಾರಿದ್ದಾರೆ.








