ಮಲೆನಾಡಲ್ಲಿ ಭಾರಿ ಮಳೆ : ಚಾರ್ಮಾಡಿ ಸಂಚಾರ ಬಂದ್
ಚಿಕ್ಕಮಗಳೂರು : ಮಲೆನಾಡಿನಲ್ಲಿ ಹೆಚ್ಚಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಾತ್ರಿ ವೇಳೆ ಚಾರ್ಮಾಡಿ ಸಂಚಾರವನ್ನು ಬಂದ್ ಮಾಡಿದೆ.
ಚಾರ್ಮಾಡಿಯಲ್ಲಿ ಯಾವುದೇ ಅನಾಹುತ ಸಂಭವಿಸಬಾರದೆಂದು ಜಿಲ್ಲಾಡಳಿತ, ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಚಾರ್ಮಾಡಿಯಲ್ಲಿ ಯಾವುದೇ ವಾಹನ ಸಂಚಾರ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ಶನಿವಾರ ರಾತ್ರಿ ಸಂಚಾರಕ್ಕೆ ಯಾವುದೇ ಅನುಮತಿ ಇರಲಿಲ್ಲ ಹೀಗಾಗಿ ನೂರಾರು ವಾಹನಗಳು ಕೊಟ್ಟಿಗೆಹಾರಕ್ಕೆ ಬಂದು ಲಾಕ್ ಆಗಿದ್ದವು.
ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಬೇಕು. ಮಂಗಳೂರು ಆಸ್ಪತ್ರೆಗೆ ಹೋಗಬೇಕು, ಟಿವಿ ನೋಡಿಲ್ಲ. ಹೋಂ ಸ್ಟೇಗೆ ಹೋಗಿದ್ವಿ ಎಂದು ಹಲವು ಕಾರಣಗಳನ್ನ ಹೇಳಿಕೊಂಡು ಚಾರ್ಮಾಡಿಗೆ ಬಂದಿದ್ದಾರೆ.
ಮತ್ತೆ ಕೆಲವರು 7.30ಕ್ಕೆ ಬಂದು ಅರ್ಧ ಗಂಟೆ ಅಷ್ಟೆ ಹೋಗಿಬಿಡುತ್ತೇವೆ ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ. ಆದರೆ ಪೊಲೀಸರು ಯಾರಿಗೂ ಅವಕಾಶ ನೀಡಿಲ್ಲ.










