ಶೂಟಿಂಗ್ ವೇಳೆ ಜಾರಿ ಬಿದ್ದು ಗಾಯಗೊಂಡ ‘ಮಾಸ್ಟರ್ ಪೀಸ್’ ಸುಂದರಿ ಶಾನ್ವಿ..!
ಸ್ಯಾಂಡಲ್ ವುಡ್ , ಕಾಲಿವುಡ್ , ಟಾಲಿವುಡ್ ಸೇರಿ ಬಹು ಭಾಷೆಗಗಳಲ್ಲಿ ನಟಿಸುತ್ತಾ ಇರುವ ನಟಿ ಶಾನ್ವಿ ಶ್ರೀವಾಸ್ತವ ಅವರು ಶೂಟಿಂಗ್ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.. ಹೌದು.. ಮಾಸ್ಟರ್ ಪೀಸ್ ಸುಂದರಿ ಶಾನ್ವಿ ಶ್ರೀವಾಸ್ತವ್ ‘ಬ್ಯಾಂಗ್’ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಆಕ್ಷನ್ ದೃಶ್ಯ ಚಿತ್ರೀಕರಣ ವೇಳೆ ಆಯತಪ್ಪಿಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಾನ್ವಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಇದೀಗ ‘ಬ್ಯಾಂಗ್’ ಸಿನಿಮಾದ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ.
ಬ್ಯಾಂಗ್ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಶಾನ್ವಿ ಗ್ಯಾಂಗ್‍ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರ ಆ್ಯಕ್ಷನ್ ದೃಶ್ಯಕ್ಕಾಗಿ ರ‍್ಜರಿ ತಯಾರಿ ನಡೆಸಿದ್ದರು. ಹೀಗಿದ್ದರೂ ಚಿತ್ರೀಕರಣದ ವೇಳೆ ಮಳೆಯ ಎಫೆಕ್ಟ್ ನಲ್ಲಿ ಶೂಟಿಂಗ್ ಮಾಡುವಾಗ ಶಾನ್ವಿ ಶ್ರೀವಾಸ್ತವ್ ಕಾಲು ಜಾರಿ ಬಿದ್ದು ಕೈಗೆ ಪೆಟ್ಟಾಗಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬ್ಯಾಂಗ್ ಚಿತ್ರದ ಆ್ಯಕ್ಷನ್ ಸಿಕ್ವೇನ್ಸ್ ನನ್ನು ಚಿತ್ರೀಕರಿಸಲಾಗುತ್ತಿತ್ತು.
ಈ ವೇಳೆ 9 ರಿಂದ 10 ಗಂಟೆಗಳ ಕಾಲ ಶೂಟಿಂಗ್ ನಡೆಯುತ್ತಿತ್ತು. ಆಗ ಶಾನ್ವಿ ಕಾಲು ಜಾರಿ ಕೆಳಗೆ ಬಿದ್ದು, ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಸದ್ಯ ಶಾನ್ವಿ ಚೇರಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಅಂದಹಾಗೆ ‘ಬ್ಯಾಂಗ್’ ಸಿನಿಮಾದ ಚಿತ್ರೀಕರಣ ಜುಲೈ 16ರಿಂದ ಪ್ರಾರಂಭವಾಗಿತ್ತು. ಕೊರೊನಾ 2ನೇ ಅಲೆ ಮುಗಿದ ಬಳಿಕ ‘ಬ್ಯಾಂಗ್’ ಸಿನಿಮಾದ ಚಿತ್ರೀಕರಣ ಆರಂಭಿಸಲಾಗಿತ್ತು. ನಟಿ ಶಾನ್ವಿ ಕೂಡ ಜುಲೈ 16ರಿಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದೊಂದು ಗ್ಯಾಂಗ್ ಸ್ಟರ್ ಸಿನಿಮಾವಾಗಿದ್ದು, ಆಕ್ಷನ್ ದೃಶ್ಯಗಳು ಹೆಚ್ಚಾಗಿವೆ. ಚಿತ್ರದ ಸ್ಟಂಟ್ ಗಾಗಿ ಶಾನ್ವಿ ಸಾಕಷ್ಟು ತಯಾರಿ ಕೂಡ ನಡೆಸಿದ್ದರು. ಸದ್ಯ ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಮಳೆಯಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗುತ್ತಿತ್ತು. ಈ ವೇಳೆ ಶಾನ್ವಿ ಸ್ಕಿಪ್ ಆಗಿ ಕೆಳಗೆ ಬಿದ್ದಿದ್ದಾರೆ.
“ಬಿಗ್ ಬಾಸ್ ಗೆ ಬರುತ್ತೇನೆ… ಬೆತ್ತಲೆ ಯೋಗ ಮಾಡ್ತೇನೆ.. ದಿನಕ್ಕೆ 50 ಲಕ್ಷ ಕೊಡ್ತೀರಾ..?” – ಬೆತ್ತಲೆ ಬಾಬಾ ..!
ಬ್ಯಾಂಗ್ ಸಿನಿಮಾ ಶ್ರೀ ಗಣೇಶ್ ಪರಶುರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗಣೇಶ್ ಅವರಿಗೆ ಇದು ಚೊಚ್ಚಲ ನರ‍್ದೇಶನದ ಸಿನಿಮಾ. ಈಗಾಗಲೇ ಹಲವು ಕಿರುಚಿತ್ರಗಳನ್ನು ಮಾಡಿದ್ದ ಗಣೇಶ್ ಬ್ಯಾಂಗ್ ಮೂಲಕ ಪರ‍್ಣ ಪ್ರಮಾಣದ ನರ‍್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಚಿತ್ರಕ್ಕೆ ಯು ಕೆ ಪ್ರೊಡಕ್ಷನ್ ಲಾಂಛನದಲ್ಲಿ ವಸಂತ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ. ಅಂದಹಾಗೆ ಶಾನ್ವಿ ಮೊದಲ ಬಾರಿಗೆ ಖಡಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗ್ಲಾಮರ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಶಾನ್ವಿ ಇದೀಗ ಬ್ಯಾಂಗ್ ಮೂಲಕ ಗ್ಯಾಂಗ್ ಸ್ಟರ್ ಆಗಿ ಚಿತ್ರಾಭಿಮಾನಿಗಳ ಮುಂದೆ ರ‍್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಬ್ಯಾಂಗ್ ಸಿನಿಮಾತಂಡ ಕೊನೆಯಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.









