ಟೋಕಿಯೋ ಒಲಿಂಪಿಕ್ಸ್ : ಚರಿತ್ರೆ ರಚಿಸುವತ್ತ ಲವ್ಲಿನಾ ಚಿತ್ತ
ಟೋಕಿಯೋ : ಎರಡು ಬಾರಿ ವಿಶ್ವ ಚಾಂಪಿಯನ್‍ಶಿಪ್‍ನ ಕಂಚಿನ ಪದಕ ಗೆದ್ದಿರುವ ಲವ್ಲಿನಾ ಬೊರ್ಗೊಹೈನ್ ನಾಳೆ ಸೆಮಿಫೈನಲ್ ನಲ್ಲಿ ಸೆಣಸಾಡಲಿದ್ದಾರೆ.
ನಾಳೆಯ ಮಹತ್ವದ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಬಾಕ್ಸರ್ ಟರ್ಕಿಯ ಬುಸೆನಾಜ್ ಸುರಮೆನೆಲ್ಲಿ ವಿರುದ್ಧ ಅಖಾಡಕ್ಕಿಳಿಯಲಿದ್ದಾರೆ.
69 ಕೆಜಿ ವಿಭಾಗದ ಪಂದ್ಯದಲ್ಲಿ ಸೆಮೀಸ್ ಗೆ ಲಗ್ಗೆ ಇಟ್ಟಿರುವ ಲವ್ಲಿನಾ ಗೆಲುವು ದಾಖಲೆ ಮಾಡಿದರೆ ಹೊಸ ಇತಿಹಾಸ ರಚನೆಯಾಗಲಿದೆ.
ಲವ್ಲಿನಾ ಬೆಳ್ಳಿ ಅಥವಾ ಚಿನ್ನದ ಪದಕ ಗೆದ್ದರೆ ಈ ಸಾಧನೆ ಮಾಡುವ ಮೊದಲ ಭಾರತದ ಬಾಕ್ಸರ್ ಎಂಬ ಸಾಧನೆ ಕೂಡ ಮಾಡಲಿದ್ದಾರೆ.
ಈ ಹಿಂದಿನ ಪಂದ್ಯದಲ್ಲಿ ಲವ್ಲಿನಾ ಅವರು 4-1 ಅಂತರದಲ್ಲಿ ಎದುರಾಳಿ ಚಿನ್-ಚೆನ್ ವಿರುದ್ಧ ಗೆಲುವು ದಾಖಲು ಮಾಡಿದ್ದರು.









