ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ bangalore saaksha tv
ಬೆಂಗಳೂರು : ಸ್ನೇಹಿತರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಡಿಜೆಹಳ್ಳಿಯಲ್ಲಿ ನಡೆದಿದೆ.
ನಿತೇಶ್ ಕೊಲೆಯಾದ ವ್ಯಕ್ತಿಯಾಗಿದ್ದು, ಪ್ರಶಾಂತ್ ಕೊಲೆ ಆರೋಪಿಯಾಗಿದ್ದಾನೆ.
ಈ ಇಬ್ಬರು ಕಳೆದ ರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ್ದು, ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಳಗ ಶುರುವಾಗಿದೆ.
ಈ ವೇಳೆ ಪ್ರಶಾಂತ್ ಹಾಲೊ ಬ್ರಕ್ಸ್ ಎತ್ತಿ ನಿತೇಶ್ ತಲೆಮೇಲೆ ಹಾಕಿದ್ದಾನೆ. ಪರಿಣಾಮ ನಿತೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಡಿಜೆಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಾರಿಯಾಗುತ್ತಿದ್ದ ಪ್ರಶಾಂತ್ ನನ್ನು ಡಿಜೆಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









