ಕಾಂಗ್ರೆಸ್ ಪಕ್ಷ ಸೇರಿದ ಹಿರಿಯ ಪತ್ರಕರ್ತ ಸಿ.ಎಸ್.ದ್ವಾರಕನಾಥ್
ಬೆಂಗಳೂರು : ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಎಸ್. ದ್ವಾರಕಾನಾಥ್ ಅವರು
ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಸಿ.ಎಸ್.ದ್ವಾರಕನಾಥ್ ಅವರು ಕಾಂಗ್ರೆಸ್ ಬಾವುಟ ಹಿಡಿದರು.
ದ್ವಾರಕಾನಾಥ್ ಅವರು ನ್ಯಾಯವಾದಿಯಾಗಿ, ಪ್ರಗತಿಪರ ಚಿಂತಕರಾಗಿ, ಪತ್ರಕರ್ತರಾಗಿ ಹೆಸರಾದವರು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.









