ಸೊಸೆ ಕಿರುಕುಳಕ್ಕೆ ಮನನೊಂದ ಮಾವ ಆತ್ಮಹತ್ಯೆಗೆ ಶರಣು..!
ಪಂಜಾಬ್ : ವೃದ್ಧ ಮಾವನ ಮೇಲೆ ಸೊಸೆ ವರದಕ್ಷಿಣೆ ಕಿರುಕುಳದ ಆರೋಪ ಮಾಡುತ್ತಾ ಕಿರುಕುಳ ನೀಡ್ತಿದ್ದ ಹಿನ್ನೆಲೆ ಅವಮಾನಿತರಾಗಿ ಮನನೊಂದ ಮಾವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್ ನ ಲುಧಿಯಾನದಲ್ಲಿ ನಡೆದಿದೆ.
60 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸೊಸೆ ಮಾಡಿದ ಸುಳ್ಳು ವರದಕ್ಷಿಣೆ ಆರೋಪದಿಂದ ಬೇಸತ್ತು ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೊಸೆ ವರದಕ್ಷಿಣೆ ಆರೋಪ ಮಾಡಿ ಪೊಲೀಸರಿಗೆ ದೂರು ನೀಡುತ್ತೇವೆಂದು ಕಿರುಕುಳ ನೀಡ್ತದ್ದರಿಂದ ಬೇಸತ್ತು ಈ ರೀತಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.
60 ವರ್ಷದ ಆ ವ್ಯಕ್ತಿಗೆ ಸೊಸೆ ಹಾಗೂ ಆಕೆಯ ಮನೆಯವರು ಬೆದರಿಕೆಯೊಡ್ಡಿದ್ದರು. ಅಲ್ಲದೇ ಹೊಡೆದು ದೈಹಿಕ ಹಿಂಸೆಯನ್ನೂ ನೀಡ್ತಿದ್ದರು. ಇಡೀ ಕುಟುಂಬದ ವಿರುದ್ಧ ವರದಕ್ಷಿಣೆ ಕೇಸ್ ದಾಖಲಿಸುವುದಾಗಿ ಹೆದರಿಸಿದ್ದರು. ಇದರಿಂದ ಆತಂಕಗೊಂಡಿದ್ದ ಮಾವ ಮರ್ಯಾದೆ ಹೋಗುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಹೆಂಡತಿ ತಿಳಿಸಿದ್ದಾರೆ.








