ಸೈಕಲ್ ನಲ್ಲಿ ಪಿಜ್ಜಾ ಡಿಲೆವರಿ ಮಾಡ್ತಿದ್ದಾರೆ… ಅಫ್ಗಾನ್ ನ ಮಾಜಿ ಸಚಿವರು..!
ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಅಲ್ಲಿನ ಸಾವಿರಾರು ಜನ ನಾನಾ ದೇಶಗಳಿಗೆ ಓಡಿಹೋಗಿದ್ದಾರೆ.. ಇನ್ನೂ ಆ ದೇಶದ ಅಧ್ಯಕ್ಷ ಅಶ್ರಫ್ ಘನಿ ಕೂಡ ಜನರನ್ನ ಸಂಕಷ್ಟದಲ್ಲಿ ಬಿಟ್ಟು ಬೇರೆ ದೇಶಕ್ಕೆ ಫಲಾಯನ ಮಾಡಿದ್ದಾನೆ.. ಪ್ರಸ್ತುತ ಯುಎಇಯಲ್ಲಿ ಆಶ್ರಯ ಪಡೆದಿದ್ದಾರೆ.
ಆಟ ನಿಲ್ಲಿಸಿದ ವಿಶ್ವದ ಅತಿ ವೇಗದ ರೋಲರ್ ಕೋಸ್ಟರ್ – ಕಾರಣವೇನು ಗೊತ್ತಾ..?
ಸೆಲೆಬ್ರಿಟಿಗಳು ಕೂಡ ದೇಶ ಬಿಟ್ಟಾಗಿದೆ.. ಈ ನಡುವೆ ಅಫ್ಘಾನಿಸ್ತಾನದ ಮಾಜಿ IT ಸಚಿವರು ಪಿಜ್ಜಾ ಡಿಲೆವರಿ ಮಾಡಿಕೊಂಡು ಜೀವನ ನಡೆಸುತ್ತಿರುವುದು ಕಂಡು ಬಂದಿದೆ.. ಹೌದು ಅಧಿಕಾರದಲ್ಲಿದ್ದಾಗೆ ಧೂಮ್ ಧಾಮಾಗಿದ್ದ ಸಚಿವರು ಈಗ ಜರ್ಮನಿಯಲ್ಲಿ ಸೈಕಲ್ ನಲ್ಲಿ ಪಿಜ್ಜಾ ಡೆಲಿವರಿ ಮಾಡ್ತಿದ್ದಾರೆ. ಅಫ್ಘಾನಿಸ್ತಾನದ ಮಾಜಿ ಸಚಿವ ಸೈಯದ್ ಅಹ್ಮದ್ ಶಾ ಸಾದತ್ ಫೋಟೋವನ್ನು ಗಲ್ಫ್ ದೇಶದ ಮಾಧ್ಯಮಗಳು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿವೆ.
ಈಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜರ್ಮನಿಯ ಲೆಫೆರಾಂಡೋ ನೆಟ್ವರ್ಕ್ ನಲ್ಲಿ ಕೆಲಸ ಮಾಡುತ್ತಿದ್ದು, ಸೈಕಲ್ ನಲ್ಲಿ ಮನೆ ಮನೆಗೆ ಹೋಗಿ ಪಿಜ್ಜಾ ನೀಡ್ತಿದ್ದಾರೆ ಎಂದು ವರದಿಯಾಗಿದೆ. ಸಾದತ್ ಕಳೆದ ವರ್ಷವೇ ಅಶ್ರಫ್ ಘನಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ನಂತರ, ಅವರು ಜರ್ಮನಿಯಲ್ಲಿ ವಾಸಿಸಲು ಪ್ರಾರಂಭಿಸಿದ್ದರು.